Showing posts with label ಕಂಡೆ ನಾ ಕಣ್ಣಾರೆನಾ ಕಂಡೆನಾ shyamasundara. Show all posts
Showing posts with label ಕಂಡೆ ನಾ ಕಣ್ಣಾರೆನಾ ಕಂಡೆನಾ shyamasundara. Show all posts

Wednesday, 1 September 2021

ಕಂಡೆ ನಾ ಕಣ್ಣಾರೆನಾ ಕಂಡೆನಾ ankita shyamasundara

 ..

ಕಂಡೆ ನಾ ಕಣ್ಣಾರೆನಾ | ಕಂಡೆನಾ ಪ


ಕಂಡೆನು ಕರುಣಾಸಾಗರನ | ಕರ

ದಂಡ ನಾಮಕೊಲಿದವನ | ಆಹಾ

ದಂಡ ಧಂಡದ ಲೀಲೆ ತೋಂಡರೊಡನಾಡು

ಫಂಢರಿಪುರವಾಸ | ಪಾಂಡುರಂಗನ ಮೂರ್ತಿ 1


vಟಿಟತಮತ್ಕೋಟಿ ಸನ್ನಿಭನ | ದೇವ |

ತಟಿನಿಯ ಪದದಿ ಪೆತ್ತವನ | ಚಾರು

ಕಟಿಯಲ್ಲಿ ಕರವ ನಿಟ್ಟವನ | ನಿಜ

ಭಟ ಜನರಿಗೆ ಮುಕ್ತಿ ಪ್ರದನ ||ಆಹಾ ||

ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ

ವಟುರೂಪದಲಿ ಪಾದಾಂಗುಟವನು ಮೆಲುವನ 2


ಭುವನದೊಳು ಸಂಚರಿಸುವನ | ಕೂರ್ಮ

ಕುವರ ಮಾನವ ಪಂಚಮುಖನ | ಋಷಿ

ಕುಮಾರ ಕುವರರ ಕಡಿದವನ ಮಹಿ

ಕುವರಿಯ ಕರವ ಪಿಡಿದವನ | ಆಹಾ

ಕುವಲಯ ಸಖ ಕುಲೋಧ್ಭವ ಭವಮಾರ್ಗಣ

ಬವರದಿ ಹಯವೇರಿ ಯವನರ ಬಡಿದನ 3


ನಿಗಮಗಳಿಗೆ ಸಿಗದವನ | ನಾ

ಲ್ಮೊಗನ ನಾಭಿಲಿ ಪಡೆದವನ | ರವಿ

ಮಗನಿಗೆ ಮಗನಾದವನ ತನ್ನ

ಪೊಗಳುವಂಥರಫÀ ಕಳೆಯವವನ ಆಹಾ

ಜಗನ್ನಾಥದಾಸರಿಗೆ | ಸೊಗಸಾದ ಮೃಷ್ಟಾನ್ನ

ಬಗೆ ಬಗೆ ಉಣಿಸಿದ ಖಗಪತಿ ಗಮನನ4


ಸಾಸಿರನಯನನುಜನ | ಮಹಿ

ದಾಸ ಕಪಿಲದತ್ತಾತ್ರೇಯನ ವೇದ

ವ್ಯಾಸ ವೃಷಭ ಹಯಮುಖನ ಭಾರ

ಶ್ರೀಶ ಮಾನಸಮಂದಿರ ||ಆಹಾ ||

ಶ್ರೀಶ ತಂದೆ ವೆಂಕಟೇಶ ವಿಠಲಂಘ್ರಿ

ದಾಸರ ಸತ್ಯಹವಾಸದಿಂದಲಿಯಿಂದು 4


ತಂದೆ ತಾಯ್ಗಳ ಸುಕೃತವೊ | ನಮ್ಮ

ಒಂದೂರಾರ್ಯರ ಅನುಗ್ರಹವೋ | ಸ್ತಂಭ

ಮಂದಿರ ರಾಯರ ದಯವೊ | ದಾಸ

ವೃಂದ ಕೃತಾಶೇಷ ಫಲವೊ | ಆಹಾ

ಇಂದು ಭಾಗದಿ ಭಕ್ತಾವೃಂದಕೆ ದರುಶನಾ

ನಂದಗರೆವ ಶಾಮಸುಂದರ ವಿಠಲನ 5

***