Wednesday, 1 September 2021

ಕಂಡೆ ನಾ ಕಣ್ಣಾರೆನಾ ಕಂಡೆನಾ ankita shyamasundara

 ..

ರಾಗ - : ತಾಳ - 


ಕಂಡೆನಾ ಕಣ್ಣಾರೆ ನಾ l ಕಂಡೆನಾ ll ಪ ll


ಕಂಡೆನು ಕರುಣಾಸಾಗರನಾ l ಕರ l

ದಂಡನಾಮಕಗೊಲಿದವನಾ ll ಆಹಾ ll

ಥಂಡ ತಂಡದ ಲೀಲೆ ತೊಂಡರನೊಡನಾಡುವ l

ಪಂಢರಿ ಪುರವಾಸ ಪಾಂಡುರಂಗನ ಮೂರ್ತಿ ll ಅ ಪ ll


ತಟಿತsಮಿತ್ಕೋಟಿ ಸನ್ನಿಭನಾ l ದೇವಾ l

ತಟನಿಯ ಪದವಿ ಪೆತ್ತವನ l ಚಾರು l

ಕಟಿಯಲ್ಲಿ ಕರವ ನಿಟ್ಟವನ l ನಿಜ l

ಭಟ ಜನರಿಗೆ ಮುಕ್ತಿಪ್ರದನಾ ll ಆಹಾ ll

ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ l

ವಟು ರೂಪದಲಿ ಪಾದಾಂಗುಟವನು ಮೆಲುವನಾ ll 1 ll


ಭುವನದೊಳು ಸಂಚರಿಸುವನಾ l ಕೂರ್ಮ l

ಕುವರ ಮಾನವ ಪಂಚಮುಖನಾ l ರಿಷಿ l

ಕುವರ ಕುವರರ ಕಡಿದವನಾ l ಮಹಿ l

ಕುವರಿಯ ಕರ ಪಿಡಿದವನಾ ll ಆಹಾ ll

ಕುವಲಯ ಸಖ ಕುಲೋದ್ಭವ ಭವ ಮಾರ್ಗಣ l

ಭವರದಿ ಹಯವೇರಿ ಯವನರ ಬಡಿವನಾ ll 2 ll


ನಿಗಮಗಳಿಗೆ ಸಿಗದವನಾ l ನಾ- l

ಲ್ಮೊಗನ ನಾಭಿಲಿ ಪಡೆದವನ l ರವಿ l

ಮಗನಿಗೆ ಮಗನಾದವನಾ l ತನ್ನ l

ಪೊಗಳುವರಘ ಕಳೆಯುವನ ll ಆಹಾ ll

ಜಗನ್ನಾಥದಾಸರಿಗೆ ಸೊಗಸಾದ ಮೃಷ್ಟಾನ್ನ l

ಬಗೆಬಗೆಲುಣಿಸಿದ ಖಗಪತಿಗಮನನ ll 3 ll


ಸಾಸಿರ ನಯನಾನುಜನ l ಮಹಿ l

ದಾಸ ಕಪಿಲ ದತ್ತಾತ್ರಯನಾ l ವೇದ l

ವ್ಯಾಸ ವೃಷಭ ಹಯಮುಖನಾ l ಭಾರ l

ತೀಶ ಮಾನಸ ಮಂದಿರನಾ ll ಆಹಾ ll

ಶ್ರೀಶ ತಂದೆ ವೆಂಕಟೇಶ ವಿಠಲನಂಘ್ರಿ l

ದಾಸರ ಸತ್ಸಹವಾಸದಿಂದಲಿ ಯಿಂದು ll 4 ll


ತಂದೆ ತಾಯಿಗಳ ಸುಕೃತವೋ l ನಮ್ಮ l

ಒಂದೂರಾರ್ಯರ ಅನುಗ್ರಹವೋ l ಸ್ತಂಭ- l

ಮಂದಿರ ರಾಯರ ದಯವೋ l ದಾಸ l

ವೃಂದ ಸುಕೃತ ಶೇಷ ಫಲವೋ ll ಆಹಾ ll

ಇಂದು ಭಾಗದಿ ನಿಂದು ಬಂದ ಭಕ್ತರಿಗಾ- l

ನಂದಗರೆವ ಶ್ಯಾಮಸುಂದರವಿಟ್ಠಲನಾ ll 5 ll

***


ಕಂಡೆ ನಾ ಕಣ್ಣಾರೆನಾ | ಕಂಡೆನಾ ಪ


ಕಂಡೆನು ಕರುಣಾಸಾಗರನ | ಕರ

ದಂಡ ನಾಮಕೊಲಿದವನ | ಆಹಾ

ದಂಡ ಧಂಡದ ಲೀಲೆ ತೋಂಡರೊಡನಾಡು

ಫಂಢರಿಪುರವಾಸ | ಪಾಂಡುರಂಗನ ಮೂರ್ತಿ 1


vಟಿಟತಮತ್ಕೋಟಿ ಸನ್ನಿಭನ | ದೇವ |

ತಟಿನಿಯ ಪದದಿ ಪೆತ್ತವನ | ಚಾರು

ಕಟಿಯಲ್ಲಿ ಕರವ ನಿಟ್ಟವನ | ನಿಜ

ಭಟ ಜನರಿಗೆ ಮುಕ್ತಿ ಪ್ರದನ ||ಆಹಾ ||

ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ

ವಟುರೂಪದಲಿ ಪಾದಾಂಗುಟವನು ಮೆಲುವನ 2


ಭುವನದೊಳು ಸಂಚರಿಸುವನ | ಕೂರ್ಮ

ಕುವರ ಮಾನವ ಪಂಚಮುಖನ | ಋಷಿ

ಕುಮಾರ ಕುವರರ ಕಡಿದವನ ಮಹಿ

ಕುವರಿಯ ಕರವ ಪಿಡಿದವನ | ಆಹಾ

ಕುವಲಯ ಸಖ ಕುಲೋಧ್ಭವ ಭವಮಾರ್ಗಣ

ಬವರದಿ ಹಯವೇರಿ ಯವನರ ಬಡಿದನ 3


ನಿಗಮಗಳಿಗೆ ಸಿಗದವನ | ನಾ

ಲ್ಮೊಗನ ನಾಭಿಲಿ ಪಡೆದವನ | ರವಿ

ಮಗನಿಗೆ ಮಗನಾದವನ ತನ್ನ

ಪೊಗಳುವಂಥರಫÀ ಕಳೆಯವವನ ಆಹಾ

ಜಗನ್ನಾಥದಾಸರಿಗೆ | ಸೊಗಸಾದ ಮೃಷ್ಟಾನ್ನ

ಬಗೆ ಬಗೆ ಉಣಿಸಿದ ಖಗಪತಿ ಗಮನನ4


ಸಾಸಿರನಯನನುಜನ | ಮಹಿ

ದಾಸ ಕಪಿಲದತ್ತಾತ್ರೇಯನ ವೇದ

ವ್ಯಾಸ ವೃಷಭ ಹಯಮುಖನ ಭಾರ

ಶ್ರೀಶ ಮಾನಸಮಂದಿರ ||ಆಹಾ ||

ಶ್ರೀಶ ತಂದೆ ವೆಂಕಟೇಶ ವಿಠಲಂಘ್ರಿ

ದಾಸರ ಸತ್ಯಹವಾಸದಿಂದಲಿಯಿಂದು 4


ತಂದೆ ತಾಯ್ಗಳ ಸುಕೃತವೊ | ನಮ್ಮ

ಒಂದೂರಾರ್ಯರ ಅನುಗ್ರಹವೋ | ಸ್ತಂಭ

ಮಂದಿರ ರಾಯರ ದಯವೊ | ದಾಸ

ವೃಂದ ಕೃತಾಶೇಷ ಫಲವೊ | ಆಹಾ

ಇಂದು ಭಾಗದಿ ಭಕ್ತಾವೃಂದಕೆ ದರುಶನಾ

ನಂದಗರೆವ ಶಾಮಸುಂದರ ವಿಠಲನ 5

***


No comments:

Post a Comment