..
ಹಿಂದೂ ಮುಂದೂ ಎಂದೆಂದಿಗೂ ಗೋವಿಂದನೆ ಎನಗೆ ಬಂಧು ಪ.
ಮನೆಯೆಂಬೋದೆ ಸುಮ್ಮನೆ ಮಕ್ಕಳೆಂಬೋದೆ ದಂಧನೆಹಣವೆಂಬೋದೆ ಬಲುಬೇನೆ ಹಾರಿಹೋಗುವದು ತಾನೆ 1
ಮಂದಗಮನೆಯರ ಕೂಡಿ ಮದವೆಲ್ಲ ಹೋಗಲಾಡಿಮುಂದೆ ತೋರದಂತೆ ಬಾಡಿ ಮೋಸಹೋಗಲಾಡಬೇಡಿ2
ಪರಧನ ಪರಸತಿ ಪರಕ್ಕೆಬಾರದಿದು ಘಾಸಸಿರಿಹಯವದನನ ಚರಣ ಭಜಿಸಿ ಪಡೆಯೆಲೊ ಕರುಣ3
***