by ಪ್ರಾಣೇಶದಾಸರು
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |
ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||
ಸಂತತಿಯೊಳು ಗುಣವಂತರೇ ಕೃಷ್ಣ ನಿ-
ರಂತರ ಬಡವರನೆಂತು ದಣಿಸುವ ಪಕಣ್ಣೇ ಬಿಡುವನು
ಬೆದರಿಸೆ ಮಾತರಿಯ ವನದೊಳಗಡಗಿಹ |
ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||
ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |
ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ 1
ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |
ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||
ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |
ನಿಲ್ಲದೆ ತಿರುಗುವಗೆಲ್ಲಿದೊ ವಾಚಿ2
ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |
ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||
ತಾನೇ ಅಗ್ನಿಯ ನುಂಗಿ
ನಭಕೇಶಗೆಮಾನವಕೊಟ್ಟಾನೆ ಪ್ರಾಣೇಶ ವಿಠಲನ 3
********
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |
ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||
ಸಂತತಿಯೊಳು ಗುಣವಂತರೇ ಕೃಷ್ಣ ನಿ-
ರಂತರ ಬಡವರನೆಂತು ದಣಿಸುವ ಪಕಣ್ಣೇ ಬಿಡುವನು
ಬೆದರಿಸೆ ಮಾತರಿಯ ವನದೊಳಗಡಗಿಹ |
ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||
ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |
ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ 1
ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |
ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||
ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |
ನಿಲ್ಲದೆ ತಿರುಗುವಗೆಲ್ಲಿದೊ ವಾಚಿ2
ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |
ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||
ತಾನೇ ಅಗ್ನಿಯ ನುಂಗಿ
ನಭಕೇಶಗೆಮಾನವಕೊಟ್ಟಾನೆ ಪ್ರಾಣೇಶ ವಿಠಲನ 3
********