Showing posts with label ಅಂಜಲೇತಕೆ ಮನವೆ ಅನುಗಾಲವು ಕಂಜನಾಭನ purandara vittala ANJALETAKAE MANAVE ANUGAALVU KANJANAABHANA. Show all posts
Showing posts with label ಅಂಜಲೇತಕೆ ಮನವೆ ಅನುಗಾಲವು ಕಂಜನಾಭನ purandara vittala ANJALETAKAE MANAVE ANUGAALVU KANJANAABHANA. Show all posts

Friday 17 December 2021

ಅಂಜಲೇತಕೆ ಮನವೆ ಅನುಗಾಲವು ಕಂಜನಾಭನ purandara vittala ANJALETAKAE MANAVE ANUGAALVU KANJANAABHANA



ಅಂಜಲೇತಕೆ ಮನವೆ ಅನುಗಾಲವು
ಕಂಜನಾಭನ ಭಕ್ತಿ ಕೈಗೊಂಡ ಬಳಿಕ ||ಪ||

ನಾರಾಯಣವೆಂಬೊ ನಾಲ್ಕು ಅಕ್ಷರದಿಂದ
ಘೋರ ದುರಿತಗಳೆಲ್ಲ ಕಳೆಯಬಹುದು
ಶ್ರೀರಾಮನಾಮವೆಂಬೊ ಸಿಂಗಾಡಿ ತಕ್ಕೊಂಡು
ವೈರಿಷಡ್ವರ್ಗಗಳ ವಧೆ ಮಾಡಬಹುದು

ಶ್ರೀಕೇಶವನೆಂಬೊ ಸಿದ್ಧಿಮಂತ್ರಗಳಿಂದ
ಬೇಕಾದ ಕರ್ಮಗಳ ಕಳೆಯಬಹುದು
ವೈಕುಂಠಪತಿಯೆಂಬ ವಜ್ರವನು ತಕ್ಕೊಂಡು
ನೂಕುವ ಯಮಭಟರ ನುಗ್ಗು ಮಾಡಬಹುದು

ಹರಿವಾಸುದೇವನೆಂಬೊ ಅಮೃತಪಾನಗಳಿಂದ
ಜರೆಮರಣಜನನಗಳ ಜಯಿಸಬಹುದು
ವರದ ಪುರಂದರ ವಿಠಲನ ಸ್ಮರಣೆಯನು
ಸರಸ ಸದ್ಭಕ್ತಿಯಿಂದ ಸವಿಮಾಡಬಹುದು
***


pallavi

anjal yAtake manave anukAlavu kanjanAbhana bhakti kaikoNDa baLika

caraNam 1

nArAyaNavembo nAlku akSaradinda ghOra duritagaLella kaLeya bahudu
shrIrma nAmavembo singADi tekkoNDu vairi SaDvargagaLa vadhE mADa bahudu

caraNam 2

shrI kEshavanembo siddhi mantragaLinda bEkAda karmagaLa kaLeya bahudu
vaikuNTha patiyemba vajravanu takkoNDu nUkuva yama bhaTara nuggu mADa bahudu

caraNam 3

hari vAsudEvanembo amrta pAnagaLinda jaremaraNa jananagaLa jayisa bahudu
varada purandara viTTalana smaraNeyanu sarasa sadbhaktiyinda savi mADa bahudu
***

ರಾಗ ಮುಖಾರಿ ಝಂಪೆ ತಾಳ (raga, taala may differ in audio)

ಅಂಜಲೇತಕೆ ಮನವೆ 
ಅನುಗಾಲವುಕಂಜನಾಭನ ಭಕುತಿ 
ಕೈಕೊಂಡ ಬಳಿಕ ಪನಾರಾಯಣನೆಂಬ 
ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ 
ಕಳೆಯಬಹುದು ||
ಶ್ರೀ ರಾಮನಾಮವೆಂಬ ಸಿಂಗಾಡಿ 
ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1

ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದ
ಕಾಕುಕರ್ಮಗಳನ್ನು ಕಳೆಯಬಹುದು ||
ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ 
ಯಮಬಂಟರನು ನುಗ್ಗು ಮಾಡಲುಬಹುದು 2

ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ 
ಜನನಗಳೆರಡ ಜಯಿಸಬಹುದು ||
ಅರಿತರೆ ಮನದೊಳಗೆ ಪುರಂದರವಿಠಲನಸರಸ 
ಸದ್ಗತಿಯನ್ನು ಸವಿಗಾಣಬಹುದು 3
********