Showing posts with label ಭಕುತರ ಸೇವೆಯ ಕೊಡು ಕಂಡ್ಯ purandara vittala. Show all posts
Showing posts with label ಭಕುತರ ಸೇವೆಯ ಕೊಡು ಕಂಡ್ಯ purandara vittala. Show all posts

Friday, 6 December 2019

ಭಕುತರ ಸೇವೆಯ ಕೊಡು ಕಂಡ್ಯ purandara vittala

ರಾಗ ಪೂರ್ವಿ. ಅಟ ತಾಳ)

ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ
ಭಕುತರ ಸಂಗವ ಕೊಡು ಕಂಡ್ಯ ಹರಿಯೆ ||ಪ||

ಶ್ರೀ ತುಲಸೀ ಪದುಮಾಕ್ಷದ ಸರವಿಟ್ಟು
ಪ್ರೀತಿಯಿಂದ ಏಕಾದಶಿಯ ಮಾಡಿ
ಚಾತುರ್ಜಾವದ ಹೊತ್ತು ಜಾಗರಗಳ ಮಾಡಿ
ಪೂತರೊಳಾಡುತಲಿಪ್ಪ ಶ್ರೀ ಹರಿಯ ||

ಶಂಖಚಕ್ರಂಗಳನೊತ್ತಿಕೊಂಡು
ಶಂಖಚಕ್ರಧರನೆಂಜಲನುಂಡು
ಕಿಂಕರತರ ದೇಹ ಪರವಶಮಾಗಲ್
ಝೇಂಕಿಸುತ ಜರೆದಾಡುತ ನಲಿವ ||

ದ್ವಾದಶ ನಾಮಗಳನುಚ್ಚರಿಸುತ
ದ್ವಾದಶ ನಾಮಂಗಳಿಟ್ಟುಕೊಂಡು
ದ್ವಾದಶಿ ಸಾಧಿಸಿ ಪಾರಣೆಗಳ ಮಾಡಿ
ದ್ವಾದಶ ಮೂರ್ತಿಯ ಮನದಲ್ಲಿ ನೆನೆವ

ಹರಿಗೆ ಸಿರಿ ರಾಣೀವಾಸಿಯೆಂದೆಂಬ ಶ್ರೀ-
ಹರಿಗೆ ಬೊಮ್ಮ ಕುಮಾರನೆಂದೆಂಬ
ಹರಿಗೆ ಹರನು ಮೊಮ್ಮಗನೆಂದೆಂಬ ಶ್ರೀ-
ಹರಿಗೆ ಸುರರಾಳುಗಳೆಂದೆಂಬ

ಆಪತ್ತು ಬಂದರೆ ಸಂಪತ್ತು ಬಂದರೆ
ಲೇಪಿಸಿಕೊಂಡಿರದೆ ನಮ್ಮ
ಶ್ರೀಪುರಂದರವಿಠಲಚರಣವೆಂಬ
ಆ ಪಾದಪದುಮವ ಮನದಲ್ಲಿ ನೆನೆವರ
***

pallavi

bhakutara sEveya koDu kaNDya ninna bhakutara sangava koDu kaNDya hariye

caraNam 1

shrI tulasI padumAkSada saraviTTu prItiyinda EkAdashiya mADi
cAturjAvada hottu jAgaragaLa mADi bhUtaroLutalippa shrI hariya

caraNam 2

shankha cakragaLanotti koNDu shankha cakradharanenjalavanuNDu
kinkaradhara dEva paravashavAgal jEnkarisuta jaredADuta naliva

caraNam 3

dvAdasha nAmagaLanuccarisuta dvAdasha nAmangaLiTTu koNDu
dvAdashi sAdhisi pAraNegaLa mADi dvAdasha mUrtiya manadalli neneva

caraNam 4

harige siri rANI vAsiyendemba shrI harige bomma kumAranendemba
harige haranu mommaganendemba shrI harige surarALuggaLendemba

caraNam 5

Apattu bandare sampattu bandare lEpisi koNDirade namma
shrI purandara viTTala caraNavemba A pAda padumava manadalli nenevara
***