ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಡು ಬಿಡು ಮನವೇ ನಿನ್ನಾ ದುರ್ಗುಣದಾ ಸಂಗಾ | ಪಿಡಿಯೋ ಸಾಧುಜನರಾ ನೆರಿಯಾ ಕಾವಾ ಶ್ರೀರಂಗಾ ಪ
ನೆನೆಯಲಿಕ್ಕೆ ವಿಷಯ ಸಂಗದಿಂದ ಕಾಮ ಕ್ರೋಧ | ಜನಿಸಿ ಮೋಹ ಸ್ಮತಿಯಗೆಟ್ಟು ಕೆಡುವಿ ಮತಿಮಂದ 1
ಗರಳ ವೇರಿದವಗ ಬೇವು ಸಿಹಿ ದೋರುವಂತೆ | ನಿರುತ ಇಂದ್ರಿಯ ವಿಷಯ ಸುಖವು ಅದರಂತೆ 2
ಪಿತ್ತವಡರಿದಾಗ ಎಂತು ಲೋಕ ತಿರುಗಿಹುದು | ಮತ್ತ ಗುರು ಹಿರಿಯರ ಬಗೆವೀ ಮನುಜರಿವರೆಂದು 3
ಎಂತು ಹೇಳಲಿ ನಿನಗ ಹರಿನಾಮ ನಂಬುಗೆಯಿಲ್ಲಾ | ಪಂಥದರವ ಜ್ಞಾನದ ದೃಷ್ಟಿ ತೆರೆಯದಾಯಿತಲ್ಲಾ 4
ತಂದೆ ಮಹಿಪತಿ ಸ್ವಾಮಿ ನಮಿಸಿ ಕೇಳು ಹಿತವಾ | ಮಂದಭವದಿ ತೊಳಲ ಬ್ಯಾಡಾ ಹೊಂದು ನಿಜಪಥವಾ 5
***