Showing posts with label ಳಳ- ಕನ್ನಡ ಗೀತೆ- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು UDAYAVAGALI NAMMA CHELUVA KANNADA NADU. Show all posts
Showing posts with label ಳಳ- ಕನ್ನಡ ಗೀತೆ- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು UDAYAVAGALI NAMMA CHELUVA KANNADA NADU. Show all posts

Monday 27 December 2021

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು UDAYAVAGALI NAMMA CHELUVA KANNADA NADU




.ಪಂಡಿತ ಭೀಮಸೇನ ಜೋಷಿ ಮತ್ತು ವಿದುಷಿ. ಕೃಷ್ಣಾ ಹಾನಗಲ್


written by Huilgol Narayana Rao ಹುಯಿಲಗೋಳು ನಾರಾಯಣರಾಯರು

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು


ರಾಜನ್ಯರಿಪು ಪರಶುರಾಮನಾಳಿದ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರ ವೃಂದದ ನಾಡು


ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು

ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು


ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರ ನಾರಾಯಣನ ಬೀಡು

***


Udayavagali Namma Cheluva Kannadanadu

Baduku Balina Nidhiyu Sadabhimanada Gudu

Udayavagali Namma Cheluva Kannadanadu

Baduku Balina Nidhiyu Sadabhimanada Gudu

Udayavagali Namma Cheluva Kannadanadu


Rajanyaripu Parashuramanalida Nadu

A Jaladhiyane Jigida Hanumanudisida Nadu

Ojeyim Meredarasugala Sahasada Sudu

Tejavanu Namageeva Veera Vrundada Naadu


Lekkigmitaakshararu Beledu Merediha Naadu

Jakkanana Shilpakaleyachchariya Karugudu

Chokka Matagala Saridavarigidu Neleveedu

Bokkasada Kanajavai Vidvattegala Kaadu


Pavaneyara Krishne Bhimeyara Taynadu

Kaveri Godeyaru Maidoleva Nalunadu

Avagam Spoortisuva Kabbigara Nademadu

Kava Gadugina Veeranarayanana Beedu

***

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||


ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು || 1 ||


ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಿ ಕಲೆಯಚ್ಚರಿಯ ಕರುಗೋಡು

ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು || ೨ ||


ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಅವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರನಾರಾಯಣನ ಬೀಡು|| ೩ ||..

***