ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮ ಮನಿಲಿ ಬ್ರಹ್ಮಾನಂದ ಬಂದು ಭಾವ ಪೂರಿಸಿದ ಮುಕುಂದ P
ಎನ್ನಮನಕೆ ಮಾಡಿದ ಮನೋಹರ ಚೆನ್ನಾಗೊಲಿದು ದೋರಿದ ಸಹಕಾರ ಮನ್ನಿಸೆನಗೆ ಬೀರಿದ ನಿಜಸಾರ ಇನ್ನೊಬ್ಬರಿಗ್ಹೇಳುದಲ್ಲೀ ವಿಚಾರ 1
ದಯದಿಂದ ಪಿಡಿದು ಎನ್ನ ಕೈಯ ಶ್ರೇಯ ಸುಖ ನೀಡಿದ ಪ್ರಾಣಪ್ರಿಯ ತ್ರಯ ಗುಣಾತೀತದ ಸುಖಾಶ್ರಯ ತ್ರೈಲೋಕದೊಳೆನಗೆ ವಿಜಯ 2
ಕಣ್ಣು ಪಾರಣಗೈಸಿದೆನ್ನ ನೋಡಿ ಎನ್ನೊಳನುಭವಾಮೃತಸಾರ ನೀಡಿ ಚಿಣ್ಣಮಹಿಪತಿ ಕೈವಶಗೂಡಿ ಧನ್ಯಧನ್ಯಗೈಸಿದ ದಯಮಾಡಿ 3
***