Showing posts with label ನಂಬಿದೆನೊ ನಿನ್ನ ಪಾದ ಜಯ ಮುಖ್ಯ ಪ್ರಾಣ gopalakrishna vittala. Show all posts
Showing posts with label ನಂಬಿದೆನೊ ನಿನ್ನ ಪಾದ ಜಯ ಮುಖ್ಯ ಪ್ರಾಣ gopalakrishna vittala. Show all posts

Monday, 2 August 2021

ನಂಬಿದೆನೊ ನಿನ್ನ ಪಾದ ಜಯ ಮುಖ್ಯ ಪ್ರಾಣ ankita gopalakrishna vittala

ನಂಬಿದೆನೊ ನಿನ್ನ ಪಾದ | ಜಯ ಮುಖ್ಯ ಪ್ರಾಣ

ಬೆಂಬಿಡದೆ ಬಹು ಮೋದ | ತೀರ್ಥಾರ್ಯ ಎನ್ನ

ಹಂಬಲಿಗೆ ಕೊಡೊ ಭೇದ | ಅರ್ಥಗಳ ವಾದ ಪ.


ನಂಬಿದೆನೊ ನಿನ್ನ ಪಾದ ಹೃದಯ

ಅಂಬರದೊಳು ನಿತ್ಯ ಹರಿಯ

ಬಿಂಬ ತೋರಿಸಿ ಎನ್ನ ಭವದ

ಅಂಬುಧಿ ಕಡೆ ಮಾಡು ವೇಗದಿ ಅ.ಪ.


ನೂರ ತೊಂಭತ್ತಷ್ಟ | ಕಲ್ಪದಲಿ ಹರಿಯ

ಆರಾಧಿಸಿದೆಯೊ ಶ್ರೇಷ್ಠ | ಅಲ್ಲಿಂದ ಮುಂದೆ ಸ-

ವಿೂರ ಪದಕೆ ದಿಟ್ಟ | ಬಂದೆಯೊ ಉತ್ಕøಷ್ಟ

ನಾರಸಿಂಹನ ಪಾದ ಭಜಿಸಿ

ಮೂರು ಅವತಾರವನೆ ಧರಿಸಿ

ವೀರ ಕಪಿರೂಪದಲಿ ರಾಮರ

ವಾರಿಜಾಂಘ್ರಿಯ ಭಜಿಸಿ1

ಭುಜ ಪರಾಕ್ರಮ ಭೀಮ | ನೆಂದೆನಿಸಿ ಕೌರವ

ಧ್ವಜವ ಕೆಡಹಿದ್ಯೊ ಸೋಮ | ವಂಶಕೆ ತಿಲುಕ ನೀ

ಧ್ವಜ ಕಪಿಗೆ ಬಹುಪ್ರೇಮ | ನಿನ್ನಲಿ ಹರಿಯ ಧಾಮ

ದ್ವಿಜನ ಉದರದಿ ಜನಿಸಿ ಅಲ್ಲಿಂ

ಕುಜನ ಮತವನು ತರಿದು ಹರಿಯ

ಧ್ವಜ ವಜ್ರಾಂಕುಶ ಪಾದ ಭಜನೆ

ನಿಜಗತಿಗೆ ಬಹು ಶ್ರೇಷ್ಠವೆನಿಸಿದೆ 2

ವ್ಯಾಪಕನೊ ನೀ ಎಲ್ಲಾ | ಕಡೆಯಲಿ ನಿನ್ನ

ರೂಪ ತುಂಬಿಹದಲ್ಲಾ | ಎನಗದನು ತೋರೊ

ಶ್ರೀ ಪತಿ ಗೋಪಾಲಕೃಷ್ಣವಿಠ್ಠಲ | ಲೀಲ

ನೀ ಪರಿಪರಿಯಿಂದ ತಿಳಿಸಿ

ತಾಪ ಹರಿಸೊ ಮೂರು ವಿಧದ

ಪಾಪಿ ಎಂದು ಎನ್ನ ನೂಕದೆ

ಕಾಪಾಡೊ ಪಂಚರೂಪ ಮೂರುತಿ 3

****