Showing posts with label ಇಂದಿನಿರುಳಿನ ಕನಸಿನಲಿ ಬಂದು ಮುಂದೆ ನಿಂದುದ rangavittala INDINIRULINA KANASINALI BANDU MUNDE NINDUDA. Show all posts
Showing posts with label ಇಂದಿನಿರುಳಿನ ಕನಸಿನಲಿ ಬಂದು ಮುಂದೆ ನಿಂದುದ rangavittala INDINIRULINA KANASINALI BANDU MUNDE NINDUDA. Show all posts

Tuesday, 9 November 2021

ಇಂದಿನಿರುಳಿನ ಕನಸಿನಲಿ ಬಂದು ಮುಂದೆ ನಿಂದುದ ankita rangavittala INDINIRULINA KANASINALI BANDU MUNDE NINDUDA



ಇಂದಿನಿರುಳಿನ ಕನಸಿನಲಿ ಬಂದು
ಮುಂದೆ ನಿಂದುದ ಕಂಡೆನೆ ಗೋವಳನ                ||ಪ||

ಆಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆ
ಜಾಣನಂಗಜನ ಪಿತನ ಕೈಯ ವೇಣು
ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ
ವಾಣಿಯ ರಚನೆ ಎಲ್ಲಿಯು ಈ ಗೋವಳನ            ||೧||

ಮೊಲ್ಲೆ ಮಲ್ಲಿಗೆ ಜೊಲ್ಲೆಯದ ಚಲ್ಲಣದ ಶಿರ
ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ
ಗೋಪಿಯರ ಮೇಲೆ ಕಡೆಗಣ್ಣ
ಚೆಲ್ಲುತೊಯ್ಯನೆ ನಡೆದ ಗೋವಳನ                ||೨||

ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ
ತುತ್ತೂರು ತೂರು ತೂರೆನುತ
ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ
ಮೊತ್ತದ ಗೋಪಿಯರನೆಲ್ಲ ಗೋವಳನ            ||೩||

ಎಸಳುಕಂಗಳ ಢಾಳ ಶಶಿ ನೊಸಲ ತಿಲಕ
ಎಸೆವ ಬಿಂಬಾಧರದ
ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ
ಎಸೆವ ನೂಪುರ ಹಾಹೆಯ ಗೋವಳನ                ||೪||

ಉಂಗುಟದಲಿ ಗಂಗೆಯಂಗಾಲಲವುಂಕೆ
ತುಂಗವೃಕ್ಷದ ಲಕ್ಷುಮೀ
ಮಂಗಳ ಮಹಿಮ ಭುಜಂಗಶಯನ ಸಿರಿ
ರಂಗವಿಠಲ ನೆರೆದ ಗೋವಳನ                    ||೫||
****

Indinirulina kanasinali bandu
Munde ninduda kandene govalana ||pa||

Animuttina pendeyada kalanduge gejje
Jananangajana pitana kaiya venu
Manikyada kankana honnudi gante
Vaniya racane elliyu I govalana ||1||

Molle mallige jolleyada callanada Sira
Dalli gumjiya dandeya celva kangala
Gopiyara mele kadeganna
Cellutoyyane nadeda govalana ||2||

Titti mauri kombu suttida katta tavili
Tutturu turu turenuta
Cittava marulu madidane pongolaludi
Mottada gopiyaranella govalana ||3||

Esalukangala dhala sasi nosala tilaka
Eseva bimbadharada
Posa muttinole mukuti honnudi gante
Eseva nupura haheya govalana ||4||

Ungutadali gangeyangalalavunke
Tungavrukshada lakshumi
Mangala mahima bujangasayana siri
Rangavithala nereda govalana ||5||
***

ರಾಗ : ಶುದ್ಧಸಾವೇರಿ  ತಾಳ : ಅಟ್ಟ (raga, taala may differ in audio)

ಇಂದಿನಿರುಳಿನ ಕನಸಿನಲ್ಲಿ ಬಂದು
ಮುಂದೆ ನಿಂದುದ ಕಂಡೆನೆ ಗೋವಳನ ||ಪ||

ಆಣಿಮುತ್ತಿನ ವೆಂಡೆಯದ ಕಾಲಂದುಗೆ ಗೆಜ್ಜೆ
ಜಾಣನಂಗಜನ ಪಿತನ ಕೈಯ ವೇಣು
ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ
ವಾಣಿಯ ರಚನೆ ಎಲ್ಲಿ[ಯು] ಈ ಗೋವಳನಾ ||೧||

ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-
ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ
ಗೋಪಿಯರ ಮೇಲೆ ಕಡೆಗಣ್ಣ
ಚೆಲ್ಲುತೊಯ್ಯನೆ ನಡೆದ ಗೋವಳನ ||೨||

ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ
ತುತ್ತುರೂ ತೂರು ತೂರೆನುತ
ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ
ಮೊತ್ತದ ಗೋಪಿಯರನೆಲ್ಲ ಗೋವಳನ ||೩||

ಎಸಳುಕಂಗಳ ಢಾಳ ಶಶಿ ನೊಸಲ ತಿಲಕ
ಎಸೆವ ಬಿಂಬಾಧರದ
ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ
ಎಸೆವ ನೂಪುರ ಹಾಹೆಯ(?) ಗೋವಳನ ||೪||

ಉಂಗುಟದಲಿ ಗಂಗೆಯಂಗಾಲಲವುಂಕೆ
ತುಂಗವಕ್ಷದ ಲಕ್ಷುಮೀ
ಮಂಗಳ ಮಹಿಮ ಭುಜಂಗಶಯನ ಸಿರಿ
ರಂಗವಿಠಲ ನೆರೆದ ಗೋವಳನ ||೫||

******