Showing posts with label ಪರ ಅಕ್ಷರವ ಕ್ಷರ ಅಕ್ಷರವ ಸೆರಗ ಪಿಡಿಯೋ mahipati. Show all posts
Showing posts with label ಪರ ಅಕ್ಷರವ ಕ್ಷರ ಅಕ್ಷರವ ಸೆರಗ ಪಿಡಿಯೋ mahipati. Show all posts

Wednesday, 1 September 2021

ಪರ ಅಕ್ಷರವ ಕ್ಷರ ಅಕ್ಷರವ ಸೆರಗ ಪಿಡಿಯೋ ankita mahipati

ಪರ ಅಕ್ಷರವ ಪ  


ಕ್ಷರ ಅಕ್ಷರವ ಸೆರಗ ಪಿಡಿಯೋ ಗುರು ಮುಖದಲಿ ನೀ ಪೂರ್ಣ ಪರಮಾನಂದ ಸುಖದೋರುವ ಬಗೆ ಅರಿಯೋ ಕೂಟ ಸ್ಥಳದಲಿ ಪ್ರಾಣಿ 1 

ರೇಚಕ ಪೂರ್ವಕದನುಭವ ತಿಳಿದು ಯೋಚಿಸಿ ನೋಡಲಿಂದ ಸೂಚಿಸಿ ತಾನೆ ಭಾಸುವ ಕ್ರಮವಿದು ಅಚರಿಸೋ ಅನುಭವದಲಿ ಪ್ರಾಣಿ 2 

ಕ್ಷರ ಅಕ್ಷರವ ತಿಳಿಯದೆ ಬರೆÀವಾ ಅಕ್ಷರದಾ ಖೂನ್ಯಾಕ ಎರಡೇ ಮಾತಿನ ಅರಿವೇ ಅದರೆ ಪರಲೋಕಕ್ಕೆ ಸೋಪಾನವಿದು ಪ್ರಾಣಿ 3 

ಇದೇ ಹೇಳಿದ ಗೀತೆಯಲ್ಲಿ ಶ್ರೀಕೃಷ್ಣನೆ ತಾಂ ಅರ್ಜುನಗೆ ಇದರಿಟ್ಟಿದು ಘನಸುಖ ಆ ಮಹಿಮನೆ ಇದರಿಂದಲಿ ತಿಳಿವದು ನೀ ಪ್ರಾಣಿ 4 

ಇಡಾ ಪಿಂಗಳ ನಾಡಿ ನಡುವಿದು ಸಾಧಿಸಿ ಮಾತಿನ ಖೂನ ಎಡಬಲ ನೋಡದೆ ಪಡಕೋ ಮಹಿಪತಿ ಒಡನೆ ನಿನ್ನೊಳು ನಿಧಾನ 5

****