ಪರ ಅಕ್ಷರವ ಪ
ಕ್ಷರ ಅಕ್ಷರವ ಸೆರಗ ಪಿಡಿಯೋ ಗುರು ಮುಖದಲಿ ನೀ ಪೂರ್ಣ ಪರಮಾನಂದ ಸುಖದೋರುವ ಬಗೆ ಅರಿಯೋ ಕೂಟ ಸ್ಥಳದಲಿ ಪ್ರಾಣಿ 1
ರೇಚಕ ಪೂರ್ವಕದನುಭವ ತಿಳಿದು ಯೋಚಿಸಿ ನೋಡಲಿಂದ ಸೂಚಿಸಿ ತಾನೆ ಭಾಸುವ ಕ್ರಮವಿದು ಅಚರಿಸೋ ಅನುಭವದಲಿ ಪ್ರಾಣಿ 2
ಕ್ಷರ ಅಕ್ಷರವ ತಿಳಿಯದೆ ಬರೆÀವಾ ಅಕ್ಷರದಾ ಖೂನ್ಯಾಕ ಎರಡೇ ಮಾತಿನ ಅರಿವೇ ಅದರೆ ಪರಲೋಕಕ್ಕೆ ಸೋಪಾನವಿದು ಪ್ರಾಣಿ 3
ಇದೇ ಹೇಳಿದ ಗೀತೆಯಲ್ಲಿ ಶ್ರೀಕೃಷ್ಣನೆ ತಾಂ ಅರ್ಜುನಗೆ ಇದರಿಟ್ಟಿದು ಘನಸುಖ ಆ ಮಹಿಮನೆ ಇದರಿಂದಲಿ ತಿಳಿವದು ನೀ ಪ್ರಾಣಿ 4
ಇಡಾ ಪಿಂಗಳ ನಾಡಿ ನಡುವಿದು ಸಾಧಿಸಿ ಮಾತಿನ ಖೂನ ಎಡಬಲ ನೋಡದೆ ಪಡಕೋ ಮಹಿಪತಿ ಒಡನೆ ನಿನ್ನೊಳು ನಿಧಾನ 5
****
No comments:
Post a Comment