by gopalaryaru
ಎಲ್ಲಿ ನಿತ್ಯಾನಂದವೆಲ್ಲಿದುದಜ್ಞಾನವೆಲ್ಲಿ ಬಂತೀ ಕಾಮವು ಗುರುವೆಎಲ್ಲಿದ್ದುದೀ ಕರ್ಮವೀಗ ನಮಗೀ ಮಾಯೆ ಯಾವ ಜನ್ಮದ ವೈರಿಯೊ ಸ್ವಾಮಿ ಪ
ಯಾಕೆ ಮಾಡಿದೆಯೊ ಪುಣ್ಯಾಪುಣ್ಯ ಮಿಶ್ರಗಳಯಾಕೆ ಬಂತೀ ದೇಹವು ತಂದೆಯಾಕೆ ವರ್ಣಾಶ್ರಮಂಗಳನೈದಿದೆವು ನಾವಿದಕೆ ಸುಖ ದುಃಖಂಗಳೂ ಸ್ವಾಮಿಯಾಕೆ ಬಂದರು ನಮಗೆ ಸತಿ ಸುತರು ನಾವಿವರೊಳೇಕೆ ಮರುಳಾದೆವಿಂತು ಗುರುವೆಪ್ರಾಕು ಜನ್ಮದ ವಾಸನೆಗಳೆಂಬ ಪಗೆಗಳಿಲ್ಯಾಕೆ ನೂಕಿದರೆಮ್ಮನೂ ಸ್ವಾಮಿ 1ಎಂತು ಬಂತೀ ರಕ್ತ ಮಾಂಸಾಸ್ತಿ ಚರ್ಮಗಳಿವೆಂತು ವಿಣ್ಮೂತ್ರಂಗಳೂ ದೇವಾಎಂತು ರಾಗದ್ವೇಷ ಮದಮತ್ಸರಂಗಳಲ್ಲೆಂತು ನರಕ ಸ್ವರ್ಗವೂ ಪರಮಾಎಂತು ಬಂತೀ ಭೋಗ ರೋಗ ವಾಸನೆಗಳಿಲ್ಲೆಂತು ವ್ಯಾಮೋಹಂಗಳು ಗುರುವೆಎಂತು ಚಿಂತೆಗಳಿದರೊಳಭಿಮಾನ ಕಷ್ಟಂಗಳೆಂತೆಂದು ನಾವರಿಯೆವೂ ಸ್ವಾಮಿ 2ಎಂತು ರಾಗ ದ್ವೇಷ ಪೋಗಿ ಸಾಧನೆಗಳೆಮಗೆಂತಹುದು ಚಿತ್ತ ಶುದ್ಧಿ ಪರಮಾಎಂತು ವೇದಾಂತ ತಿಳವದು ಬೊಮ್ಮ ಸುe್ಞÁನವೆಂತಹುದು ಸತ್ರಬುದ್ಧಿಸ್ವಾಮಿಎಂತು ನಾವಾತ್ಮರಾಗುವೆವು ನಿತ್ಯಾನಂದವೆಂತಹುದು ನಿತ್ಯ ತೃಪ್ತೀ ಗುರುವೆಅಂತು ಕರುಣಿಸಿ ಸಕಲಚಿಂತೆಗಳ ಪರಿಹರಿಸನಂತ ಗೋಪಾಲಾರ್ಯನೆ ಸ್ವಾಮಿ3
***