ಧಣೀ ಧಣೀ ಧಣೀ ಧಣೀ
ಗುರುರಾಯ ನೀನೆ ಧಣೀ ಧಣೀ ಪ
ಮನದಿ ನಿನ್ನನೆ ನಿತ್ಯ ನೆನೆವರ ಪೊರೆವಂಥ ಅ.ಪ
ಆದಿಯುಗದಿ ಪ್ರಹ್ಲಾದರಾಯನೆನಿಸಿ
ಮಾಧವನುತ್ತಮನೆಂದು ಸಾಧಿಸಿದಂಥಾ 1
ತ್ರೇತಾಯುಗದಿ ರಘುನಾಥನನುಜನೆನಿಸಿ
ಸೀತಾಪತಿಯ ಪಾದ ಈತೆರ ಭಜಿಸಿದಂಥ 2
ದ್ವಾಪರ ಯುಗದಲ್ಲಿ ಭೂಪ ಬಾಹ್ಲೀಕÀನೆನಿಸಿ
ಶ್ರೀ ಪನಾಙ್ಞ ದಿಂದಲೀಪರಿ ಜನಿಸಿದಂಥ 3
ಕಲಿಯುಗದಲ್ಲಿ ನೀ ಚಲುವ ವ್ಯಾಸನೆನಿಸಿ
ಇಳೆಯೊಳು ಗ್ರಂಥರಚಿಸಿ ಜಲಜನಾಭನೊಲಿಸಿದಂಥ 4
ಎರಡನೆ ಜನುಮದಿ ಗುರುರಾಘವೇಂದ್ರನಾಗಿ !
ಗುರುಜಗನ್ನಾಥ ವಿಠಲ ಚರಣ ಕಮಲ ಭಜಿಸಿದಂಥ 5
***
ಧಣೀ ಧಣೀ ಧಣೀ ಧಣೀ
ಗುರುರಾಯ ನೀನೆ ಧಣೀ ಧಣೀ || PA ||
ಮನದಿ ನಿನ್ನನೆ ನಿತ್ಯ ನೆನೆವರ ಪೊರೆವಂಥ || A PA ||
ಆದಿಯುಗದಿ ಪ್ರಹ್ಲಾದರಾಯನೆನಿಸಿ
ಮಾಧವನುತ್ತಮನೆಂದು ಸಾಧಿಸಿದಂಥಾ || 1 ||
ತ್ರೇತಾಯುಗದಿ ರಘುನಾಥನನುಜನೆನಿಸಿ
ಸೀತಾಪತಿಯ ಪಾದ ಈತೆರ ಭಜಿಸಿದಂಥ || 2 ||
ದ್ವಾಪರ ಯುಗದಲ್ಲಿ ಭೂಪ ಬಾಹ್ಲೀಕನೆನಿಸಿ
ಶ್ರೀ ಪನಾಙ್ಞ ದಿಂದಲೀಪರಿ ಜನಿಸಿದಂಥ || 3 ||
ಕಲಿಯುಗದಲ್ಲಿ ನೀ ಚಲುವ ವ್ಯಾಸನೆನಿಸಿ
ಇಳೆಯೊಳು ಗ್ರಂಥರಚಿಸಿ ಜಲಜನಾಭನೊಲಿಸಿದಂಥ || 4 ||
ಎರಡನೆ ಜನುಮದಿ ಗುರುರಾಘವೇಂದ್ರನಾಗಿ !
ಗುರುಜಗನ್ನಾಥ ವಿಠಲ ಚರಣ ಕಮಲ ಭಜಿಸಿದಂಥ || 5 ||
***
dhaṇī dhaṇī dhaṇī dhaṇī gururāya nīne dhaṇī dhaṇī || PA ||
manadi ninnane nitya nenevara porevantha || A PA ||
ādiyugadi prahlādarāyanenisi mādhavanuttamanendu sādhisidanthā || 1 ||
trētāyugadi raghunāthananujanenisi sītāpatiya pāda ītera bhajisidantha || 2 ||
dvāpara yugadalli bhūpa bāhlīkanenisi śrī panāṅña dindalīpari janisidantha || 3 ||
kaliyugadalli nī caluva vyāsanenisi iḷeyoḷu grantharacisi jalajanābhanolisidantha || 4 ||
eraḍane janumadi gururāghavēndranāgi! Gurujagannātha viṭhala caraṇa kamala bhajisidantha || 5 ||
Plain English
dhani dhani dhani dhani gururaya nine dhani dhani || PA ||
manadi ninnane nitya nenevara porevantha || A PA ||
adiyugadi prahladarayanenisi madhavanuttamanendu sadhisidantha || 1 ||
tretayugadi raghunathananujanenisi sitapatiya pada itera bhajisidantha || 2 ||
dvapara yugadalli bhupa bahlikanenisi sri pananna dindalipari janisidantha || 3 ||
kaliyugadalli ni caluva vyasanenisi ileyolu grantharacisi jalajanabhanolisidantha || 4 ||
eradane janumadi gururaghavendranagi! Gurujagannatha vithala carana kamala bhajisidantha || 5 ||
***