Audio by Sri. Madhava Rao
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ ಎನ್ನನು ಪಾಲಾಬ್ಧಿಸಂಜಾತೆ ||ಪ||
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರರಮಣಿ
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ ||
ದಯದಿಂದ ನೋಡೆ ಭಜಿಪ ಭಕ್ತರ
ಭಯ ದೂರ ಮಾಡೆ
ದಯ ಪಾಲಿಸೆ ಮಾತೆ ತ್ರೈಲೋಖ್ಯವಿಖ್ಯಾತೆ
ಜಯದೇವಿ ಸುವ್ರತೆ ಹಯವದನನ ಪ್ರೀತೆ ||
ನೀನಲ್ಲದನ್ಯ ರಕ್ಷಿಪರನು
ಕಾಣೆ ನಾ ಮುನ್ನ
ದಾನವಾಂತಕ ಸಿರಿಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ||
****
ರಾಗ ಶ್ರೀ. ಅಟ ತಾಳ (raga, taala may differ in audio)
Palise enna shri mahalaksmi |
Palise ennanu palabhdi sanjhate
Lalitangi shubhe devi mangale devi ||
Vedabhimani sarasakhsi shridhara ramani
Kaduko ninnaya pada sevakarannu
Adi shakti sarvadhare guna purne ||1||
Dayadinda node bhajipa bhaktara bhaya dura madhe
Daya palise mate trailokya vikhyate
Jaya devi suvrate hayavadanana prite ||2||
Ninalladhanya raksiparanu kane na munna
Danavantakha siri purandara vittalana
Dhyaniya bhakutara mana ninnadu taye ||3||
***
pallavi
pAlise enna shrI mahAlakSmi pAlise ennanu pAlAbdi sanjAte
anupallavi
lalitAngi shubhe dEvi mangaLe dEvi
caraNam 1
vEdAbhimAni sArasAkSi shrIdhara ramaNi kAdukO ninnaya
pAda sEvakarannu Adi shakti sarvAdhAre guNa pUrNe
caraNam 2
dayadinda nODe bhajipa bhaktara bhaya dUra mADe daya pAlise
mAte trailOkya vikhyAte jaya dEvi suvrate hayavadanana prIte
caraNam 3
nInalladanya rakSiparanu kANe nA munna dAnavAntaka siri
purandara viTTalana dhyAniya bhakutara mAna ninnadu tAye
***
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ ಎನ್ನನು ಪಾಲಾಬ್ಧಿಸಂಜಾತೆ |
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ||
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ||
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ |
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ||
ದಯದಿಂದ ನೋಡೆ ಭಜಿಪ ಭಕ್ತರ ಭಯ
ದೂರ ಮಾಡೆ ದಯ ಪಾಲಿಸೆ ಮಾತೆ
ತ್ರೈಲೋಕ್ಯವಿಖ್ಯಾತೆ ಜಯದೇವಿ ಸುವ್ರತೆ
ಹಯವದನನ ಪ್ರೀತೆ ||
ನೀನಲ್ಲದೆ ಅನ್ಯ ರಕ್ಷಿಪರನು
ಕಾಣೆ ನಾ ಮುನ್ನ ದಾನವಾಂತಕ
ಸಿರಿಪುರಂದರವಿಠ್ಠಲನ ಧ್ಯಾನಿಪ
ಭಕುತರ ಮಾನ ನಿನ್ನದು ತಾಯೆ||
***