ಭಾರತೀಶಪಾಹಿ ಸುರವರ ನಾ ಮುಗಿವೆನು ಕರ ಪ
ಸೂರಿನಿವಾಸ ಭೋಗಾಪುರ ಮಂದಿರ ಮಾಮುದ್ಧರ ಅ.ಪ
ಶ್ರೀರಘುವರನಾಜ್ಞೆಯಿಂದಲಿ ವಾರಿಧಿಯಕ್ಷಣದಲಿ
ಹಾರಿ ಭೂಮಿಸುತೆ ಗೆರಗುತಲಿ ಮುದ್ರಿಕೆಯ ಕೊಡುತಲಿ
ಶ್ರೀರಾಮಗೊಂದಿಸಿದಿ ಕ್ಷೇಮದಲಿ ಇಹಳೆಂದು ಪೇಳಿ 1
ಇಂದು ಕುಲದಿ ಪಾಂಡು ನೃಪತಿಯ ಎನಿಸಿದೆಯೊ ತನಯ
ಬಂಥ ಕೌರವ ವೃಂದ ಮಥಿಸಿದೆಯಾರಣದೊಳಗೆ ವಿಜಯ
ನಂದಸುತನ ನೊಲಿಮೆ ಪಡದಿಯಾ ಭೀಮಶೈನರಾಯ 2
ಮೇದಿನಿ ಸುರಗೃಹದಿ ಜನಿಸಿದ ವೇದಾರ್ಥ ತಿಳಿಸಿದ
ವಾದಿಗಳ ನಿರ್ವಾದಗೈಸಿದ ದಿಗ್ವಲಯ ಚರಿಸಿದ ಭೇದ
ಭೋದಕ ಶಾಸ್ತ್ರವಿರಚಿಸಿದ ಶ್ರೀ ಪೂರ್ಣಬೋಧ 3
ಕಾಲಕಾಲಗಳಲ್ಲಿ ದ್ವಿಜಜನ ಬರುತಿಹರು ನಿನ್ನ
ಧೂಳಿ ದರುಶನಾಬಿಷೇಚನ ಶೇವಿಪರು ಘನ್ನ
ಪಾಲಿಸಬೇಕಯ್ಯ ಭಕುತರನಾ ಪಾಂಚಾಲಿರಮಣ 4
ನೀರಜಾಸನಾದಿ ಸುರಗಣ ವಂದಿತ ಸುಚರಣ
ಕಾರ್ಪರ ಶಿರಿನಾರಸಿಂಹನ ಒಲಿಸಿರುವ ನಿನ್ನ
ಶೇರಿದವರಭೀಷ್ಟ ವರ್ಷಣ ದುರಿತಾಪ ಹರಣ 5
****