ದಾರಿ ತೋರೋ ಶ್ರೀ ಮನೋಹರಾ ।
ಶ್ರೀ ಮನೋಹರಾ ಶ್ರೀ ಮನೋಹರಾ ।। ಪಲ್ಲವಿ ।।
ಚರಣ ಸೇವಕರ ಸೇವಕನೆಂದು ಸಾಧನಕೀಗ ।। ಅ ಪ ।।
ಜ್ಞಾನಗಮ್ಯ ನೀನೆಂದೂ । ಬಹು ।
ಧಾನ್ಯ ವತ್ಸರದೊಳೂ ।
ಗುಣ ರೂಪ ನಾಮ ಕೀರ್ತನ ।
ಸೇವೆ ಮಾಡುತಿಪ್ಪ ಭೃತ್ಯನಾ -
ನಿನ್ನವಗೆ ಅನುದಿನದಿ ।। ಚರಣ ।।
ಭಕ್ತಿ ಮುಕ್ತಿ ಪ್ರದಾಯಕಾ ।
ವಾಖ್ಯಾ ಶಕ್ತಿದಾಯಕಾ ।
ಯುಕ್ತ ಧರ್ಮ ಮಾರ್ಗದರ್ಶಕಾ । ತ್ವ ।
ದ್ಭಕ್ತ ಜನ ರಕ್ಷಕಾ ಕರಾವಲಂಬನವಿತ್ತು ।। ಚರಣ ।।
ಲೌಕಿಕ ಸಂಸಾರದ ಲಂಪಟದಲ್ಲಿರೆ ।
ಲೋಕೈಕನಾಥನೇ ಸರ್ವ ।
ವ್ಯಾಪ್ತ ಅಂತರ್ಯಾಮಿ ಎನ್ನುವಾ ।
ಸ್ಮೃತಿ ನಿರುತದಿ ಇತ್ತು ।। ಚರಣ ।।
ವಿದ್ಯಾ ಸದ್ಬುದ್ಧೀ ಶಕ್ತಿ ।
ಶ್ರದ್ಧಾ ಆಯು: ಕೀರುತೀ ।
ಮಧ್ವ ಮತ ತತ್ತ್ವ ಕೀರುತೀ । ಪ್ರ ।
ಸಿದ್ಧಿ ಪಡಿಸಿ ಮೋದದೀ ।
ಶುದ್ಧಾ ಪದ್ಧತಿ ಮೀರದ ।। ಚರಣ ।।
ಉರಗಾದ್ರಿ ವಾಸ ವಿಠ್ಠಲಾ ಹೃತ್ಯಾಶಾ ।
ತಂದೆ ವೆಂಕಟೇಶ ವಿಠ್ಠಲಾ ।
ನೀನೆಂದೂ ಏಕಾಂತದಲ್ಲಿ ।
ಮುಂದಿನ ಸಾಧನಗಳಲಿ ।। ಚರಣ ।।
****
Tande Venkatesha Vittala Dasaru
ಹೆಸರು : ಪರಮಪೂಜ್ಯ ಶ್ರೀ ಆರ್ ರಾಮಚಂದ್ರರಾಯರು
ಕಾಲ : ಕ್ರಿ ಶ 1907 - 1982
ಅಂಕೀತೋಪದೇಶ : ಶ್ರೀ ಉರಗಾದ್ರಿವಾಸವಿಠ್ಠಲರು
ಅಂಕಿತ : ಶ್ರೀ ತಂದೆ ವೇಂಕಟೇಶ ವಿಠ್ಠಲ
" ಅಂಕಿತ ಪದ "
***