Showing posts with label ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ vaikunta vittala. Show all posts
Showing posts with label ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ vaikunta vittala. Show all posts

Sunday, 1 August 2021

ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಮದಕರಿಯ ಕವಳವಾದೆನೆಲೆ ದೇವ

ಮದನಪಿತನುಳುಹದಿರೆ ಗತಿ ಯಾರು ಎನಗೆ ಪ


ಉತ್ತಮಸುಧನ್ವ ಧ್ರುವ ವಿಭೀಷಣನು ಮೊದಲಾಗಿ

ಪೃಥ್ವಿಯೊಳು ನೀ ಸಲಹಿದವರನನವರತ

ಮತ್ತೆ ನಾನಿಂದು ಗಜದೊಡನೆ ಕಂಗೆಡುತಿರೆ ವಿ

ಪತ್ತಕಡೆಗಾಣಿಸಲಶಕ್ಯವೇನಯ್ಯಾ 1


ದುರುಳಖಳ ಪ್ರಹ್ಲಾದನನಲೆಬಡಿಸುತಿರಲದನು

ಪರಿಹರಿಸಲೆಲ್ಲಿಂದ ಬಂದೊದಗಿದೆ

ಮೊರೆ ಇಡಲು ಕರಿಯ ಧ್ವನಿ ನಿನಗೆಂತು ಕೇಳಿತು

ಶರಣಜನಬಂಧುವೇ ಬಂಧನವ ಪರಿಹರಿಸೋ 2


ಆದೊಡೇನಾಯ್ತು ನಿನ್ನಂಘ್ರಿನಂಬಿರಲು

ನೀದಯದಿ ನಿನ್ನೊಳಿಂಬಿಡುವ ನೆವದೀ

ಮಾಧವನೆ ಗಜವಾಗಿ ಬಂದೊದಗಿದೆಯೋ

ನಾಧನ್ಯ ವೈಕುಂಠಪತಿ ಚೆನ್ನರಾಯ 3

***