Sunday, 1 August 2021

ಮದಕರಿಯ ಕವಳವಾದೆನೆಲೆ ದೇವ ಮದನಪಿತನುಳುಹದಿರೆ ಗತಿ ಯಾರು ಎನಗೆ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಮದಕರಿಯ ಕವಳವಾದೆನೆಲೆ ದೇವ

ಮದನಪಿತನುಳುಹದಿರೆ ಗತಿ ಯಾರು ಎನಗೆ ಪ


ಉತ್ತಮಸುಧನ್ವ ಧ್ರುವ ವಿಭೀಷಣನು ಮೊದಲಾಗಿ

ಪೃಥ್ವಿಯೊಳು ನೀ ಸಲಹಿದವರನನವರತ

ಮತ್ತೆ ನಾನಿಂದು ಗಜದೊಡನೆ ಕಂಗೆಡುತಿರೆ ವಿ

ಪತ್ತಕಡೆಗಾಣಿಸಲಶಕ್ಯವೇನಯ್ಯಾ 1


ದುರುಳಖಳ ಪ್ರಹ್ಲಾದನನಲೆಬಡಿಸುತಿರಲದನು

ಪರಿಹರಿಸಲೆಲ್ಲಿಂದ ಬಂದೊದಗಿದೆ

ಮೊರೆ ಇಡಲು ಕರಿಯ ಧ್ವನಿ ನಿನಗೆಂತು ಕೇಳಿತು

ಶರಣಜನಬಂಧುವೇ ಬಂಧನವ ಪರಿಹರಿಸೋ 2


ಆದೊಡೇನಾಯ್ತು ನಿನ್ನಂಘ್ರಿನಂಬಿರಲು

ನೀದಯದಿ ನಿನ್ನೊಳಿಂಬಿಡುವ ನೆವದೀ

ಮಾಧವನೆ ಗಜವಾಗಿ ಬಂದೊದಗಿದೆಯೋ

ನಾಧನ್ಯ ವೈಕುಂಠಪತಿ ಚೆನ್ನರಾಯ 3

***


No comments:

Post a Comment