ಹ್ಯಾಂಗೆ ಮಾಡಲೋ ನರಸಿಂಗ ದೊರೆಯ ಪ
ಹ್ಯಾಂಗೆ ಮಾಡಲಿನ್ನು ಭವದಿಭಂಗ ಪಡುವೆ ನಿಮ್ಮ ಪಾದಸಂಗ ದೊರಕುವದಕೆ ಅಂತ-ರಂಗದ ಸಾಧನ ವ್ಯಾವುದ್ಹೇಳೋ ಅ.ಪ.
ಎಲ್ಲಿ ಪೋದೆಯೋ ನಮ್ಮಲ್ಲೆ ನೀನುಕಲ್ಲು ಆದೆಯೋ ಬಲ್ಲೆ ಸುಖದ ಬಾಧೆಎಲ್ಲ ಬಿಟ್ಟು ನಿಮ್ಮ ಪಾದದಲ್ಲಿ ಸೇರಿ ಸೇವೆಮಾಳ್ಪರಲ್ಲಿ ಛಲವ ಮಾಡುವರೆ 1
ಎಷ್ಟು ಮರುಗಲೋ ನಾ ಮನದಿಬಾಯಿಬಿಟ್ಟು ಒದರಲೋಸಿಟ್ಟು ಮಾಡದಲೆ ನೀನು ಇಷ್ಟು ಮಾತುಗಳನ್ನೆ ಕೇಳಿಸೃಷ್ಟಿಗೀಶ ಸರ್ವ ಅಭೀಷ್ಟ ಕೊಡುವೆ ಎಂದು ಬಂದೆ 2
ಬೇಸರವಾಯಿತೋ ದೇಹ ಎನಗೆ ಸೋಸು ಇಲ್ಲವೋವಾಸುದೇವ ನಿನ್ನ ಪೂಜೆ ಆಸೆ ಮಾತ್ರದಿಂದ ದೇಹಪೋಷಿಸುವೆನು ನಿತ್ಯ ಇಂದಿರೇಶ ಮನದಿ ಭಾಷಿಸುವುದು 3
****