ಹ್ಯಾಂಗೆ ಮಾಡಲ್ಯೋ ನರಸಿಂಗ ದೊರೆಯೆ ll ಪ ll
ಹ್ಯಾಂಗೆ ಮಾಡಲಿನ್ನು ಭವದಿ ಭಂಗ ಪಡುವೆ ನಿನ್ನ ಪಾದ
ಸಂಗ ದೊರಕುವದಕೆ ಅಂತರಂಗದ ಸಾಧನ ವ್ಯಾವುದ್ಹೇಳೋ ll ಅ ಪ ll
ಎಲ್ಲಿ ಪೊದೆಯೋ ನಮ್ಮಲ್ಲಿ ನೀನು ಕಲ್ಲು ಆದೆಯೋ l
ಒಳ್ಳೆ ಬಾಧೆ ವಿಷಯ ಸುಖಗಳೆಲ್ಲಾ
ಬಿಟ್ಟು ನಿನ್ನ ಪಾದ ll
ದಲ್ಲಿ ಸೇರಿ ಸೇವೆ
ಮಾಳ್ಪರಲ್ಲಿ ಛಲವ ಮಾಡುವರೆ ll 1 ll
ಎಷ್ಟು ಮರುಗಲ್ಯೋ ಮನದೊಳಗೆ
ಬಾಯಿಬಿಟ್ಟು ಒದರಲ್ಯೊ l
ಸಿಟ್ಟು ಮಾಡದಾಲೆಯೆನ್ನ ಅಷ್ಟ ಇಷ್ಟು ಮಾತುಗಳನ್ನೆ ಕೇಳಿ l
ಸೃಷ್ಟಿಗೀಶ ಸರ್ವರಾಭೀಷ್ಟ ಕೊಡುವೆ ಎಂದು ಬಂದೆ ll 2 ll
ಬ್ಯಾಸರಾದಿ ತೋರೀ ದೇಹದಲ್ಲಿ ಸೋಸುಹೋದಿತೊ l
ವಾಸುದೇವ ನಿನ್ನ ಪೂಜೆಯಾಶೆಯಿಂದ ಮಾತ್ರ ದೇಹ
ಪೋಷಿಸುವೆನು ನಿತ್ಯ ಇಂದಿರೇಶ ಮನದಿ ಭಾಸಿಸುವುದು ll 3 ll
***
ಹ್ಯಾಂಗೆ ಮಾಡಲೋ ನರಸಿಂಗ ದೊರೆಯ ಪ
ಹ್ಯಾಂಗೆ ಮಾಡಲಿನ್ನು ಭವದಿಭಂಗ ಪಡುವೆ ನಿಮ್ಮ ಪಾದಸಂಗ ದೊರಕುವದಕೆ ಅಂತ-ರಂಗದ ಸಾಧನ ವ್ಯಾವುದ್ಹೇಳೋ ಅ.ಪ.
ಎಲ್ಲಿ ಪೋದೆಯೋ ನಮ್ಮಲ್ಲೆ ನೀನುಕಲ್ಲು ಆದೆಯೋ ಬಲ್ಲೆ ಸುಖದ ಬಾಧೆಎಲ್ಲ ಬಿಟ್ಟು ನಿಮ್ಮ ಪಾದದಲ್ಲಿ ಸೇರಿ ಸೇವೆಮಾಳ್ಪರಲ್ಲಿ ಛಲವ ಮಾಡುವರೆ 1
ಎಷ್ಟು ಮರುಗಲೋ ನಾ ಮನದಿಬಾಯಿಬಿಟ್ಟು ಒದರಲೋಸಿಟ್ಟು ಮಾಡದಲೆ ನೀನು ಇಷ್ಟು ಮಾತುಗಳನ್ನೆ ಕೇಳಿಸೃಷ್ಟಿಗೀಶ ಸರ್ವ ಅಭೀಷ್ಟ ಕೊಡುವೆ ಎಂದು ಬಂದೆ 2
ಬೇಸರವಾಯಿತೋ ದೇಹ ಎನಗೆ ಸೋಸು ಇಲ್ಲವೋವಾಸುದೇವ ನಿನ್ನ ಪೂಜೆ ಆಸೆ ಮಾತ್ರದಿಂದ ದೇಹಪೋಷಿಸುವೆನು ನಿತ್ಯ ಇಂದಿರೇಶ ಮನದಿ ಭಾಷಿಸುವುದು 3
****
No comments:
Post a Comment