Showing posts with label ನಂಬಿದೆ ನಿನ್ನ ಪಾದವ ಕಾಣಬೇಕೆಂದು vijaya vittala. Show all posts
Showing posts with label ನಂಬಿದೆ ನಿನ್ನ ಪಾದವ ಕಾಣಬೇಕೆಂದು vijaya vittala. Show all posts

Thursday, 17 October 2019

ನಂಬಿದೆ ನಿನ್ನ ಪಾದವ ಕಾಣಬೇಕೆಂದು ankita vijaya vittala

ನಂಬಿದೆ ನಿನ್ನ ಪಾದವ ಕಾಣಬೇಕೆಂದು
ಹಂಬಲಿಸಿದೆ ಮಾಧವ
ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ
ಕಮಲಾಂಬಕ ರಂಗಾ ಪ

ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ
ಇಂದಿರಾ ಮನೋವಿಲಾಸ
ವೃಂದಾರಕರ ನಿಜಕೋಶಾ
ಮಂದರಧರ ವಸುಂಧರಪತಿ ಪುರಂದರ
ವಂದಿತ ಸುಂದರಾಂಗ ಕಂಬು
ಇಂದೀಗ ತೊಂದರೆಕಿಡದಿರು 1

ತಂದಿತಾಯಿಗಳವರಾರೊ ತಾವಳಿದು
ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು
ಪೊಂದದೆನಲೊ ಇಳಿಜಾರು ಎಂದೆಂದಿಗಿದರ
ಗಂಧದೊಳಗೆ ನಾ ಬಂದು ಬಳಲಿ ಸಂ
ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ
ತಂದೆ ತಾಯಿ ಸರ್ವಂದವು ನೀನೆ 2

ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ
ಕುಂದಿದೆ ಎಲ್ಲ ಕಾವಿಲಿ
ಬೆಂದೆನೋ ಬಲು ಕೋವಿಲಿ
ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ
ಇಂದು ಚರಣರವಿಂದವ ತೋರಿಸುವ
ಬಂಧು ವಿಜಯವಿಠ್ಠಲೆಂದಹುದೆಂದು 3
*********