Showing posts with label ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ramadasa.a. Show all posts
Showing posts with label ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ramadasa.a. Show all posts

Sunday 5 September 2021

ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa

ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ಪ 


ಬೇಡ ಸುಖವು ಕೃಷ್ಣ ಬೇಡ ಫಲವಿಫಲ ಬೇಡ ಮಾನಾಪಮಾನ ಬೇಡ ಜಯಾಪಜಯ ಅ.ಪ 


ನಿದ್ರೆಸುಖವು ಬೇಡ ಭದ್ರಭೋಜನ ಬೇಡ ತಿದ್ದಿದ ವಾಸ್ತುವುಬೇಡ ಮಧುರವು ಬೇಡ ಸದನ ವಿತ್ತವು ಬೇಡ ಹೃದಯದಿ ರಾಮನಾಮ ಪರಿಹರಿಸಲು ಬೇಡ 1 

ನರಕ ಬಾಧೆಯ ಪರಿಹರಿಸಲು ಬೇಡ ದುರಿತ ಸಂತತಿಗಳ ತೊರೆಯಿಸ ಬೇಡ ಸುರಲೋಕ ಸಾಮ್ರಾಜ್ಯ ವರವನೀಯಲು ಬೇಡ ನಿರುತ ನಿನ್ನಯ ಪದ್ಮ | ಚರಣವ ತೋರೆಂದು2 

ಮಾವಿನಕೆರೆರಂಗ ಶ್ರೀವನಿತಾ ಸಂಗ ಭಾವಜಪಿತರಂಗ ಗರುಡ ತುರಂಗ ಭಾವನೆಗೈದು ಯೆನ್ನ ಸರ್ವಜನ್ಮದೆ ನಿನ್ನ ದಿವ್ಯನಾಮವ ಭಜನೆಗೈವ ಬುದ್ಧಿಯು ಮಾತ್ರ 3 

ನೀ ಮರೆಯದಿರಯ್ಯ ನಾಮರೆಯುವನಯ್ಯ ಕಾಮಿತವೊಂದಿದ ನೀಡೊ ಮುಕುಂದ ಸೋಮಧರ ವಂದಿತ ರಾಮದಾಸಾರ್ಚಿತ ಭೀಮವಿಕ್ರಮರೂಪ ಅಮಿತಕಲಾಪಾ 4

***