ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ಬೇಡುವೆನೊಂದು ಬೇಡತಕ್ಕುದು ಎಂದು ಬೇಡ ವರಗಳೆನಗೆ ನೀಡು ಅದನೊಂದ ಪ
ಬೇಡ ಸುಖವು ಕೃಷ್ಣ ಬೇಡ ಫಲವಿಫಲ ಬೇಡ ಮಾನಾಪಮಾನ ಬೇಡ ಜಯಾಪಜಯ ಅ.ಪ
ನಿದ್ರೆಸುಖವು ಬೇಡ ಭದ್ರಭೋಜನ ಬೇಡ ತಿದ್ದಿದ ವಾಸ್ತುವುಬೇಡ ಮಧುರವು ಬೇಡ ಸದನ ವಿತ್ತವು ಬೇಡ ಹೃದಯದಿ ರಾಮನಾಮ ಪರಿಹರಿಸಲು ಬೇಡ 1
ನರಕ ಬಾಧೆಯ ಪರಿಹರಿಸಲು ಬೇಡ ದುರಿತ ಸಂತತಿಗಳ ತೊರೆಯಿಸ ಬೇಡ ಸುರಲೋಕ ಸಾಮ್ರಾಜ್ಯ ವರವನೀಯಲು ಬೇಡ ನಿರುತ ನಿನ್ನಯ ಪದ್ಮ | ಚರಣವ ತೋರೆಂದು2
ಮಾವಿನಕೆರೆರಂಗ ಶ್ರೀವನಿತಾ ಸಂಗ ಭಾವಜಪಿತರಂಗ ಗರುಡ ತುರಂಗ ಭಾವನೆಗೈದು ಯೆನ್ನ ಸರ್ವಜನ್ಮದೆ ನಿನ್ನ ದಿವ್ಯನಾಮವ ಭಜನೆಗೈವ ಬುದ್ಧಿಯು ಮಾತ್ರ 3
ನೀ ಮರೆಯದಿರಯ್ಯ ನಾಮರೆಯುವನಯ್ಯ ಕಾಮಿತವೊಂದಿದ ನೀಡೊ ಮುಕುಂದ ಸೋಮಧರ ವಂದಿತ ರಾಮದಾಸಾರ್ಚಿತ ಭೀಮವಿಕ್ರಮರೂಪ ಅಮಿತಕಲಾಪಾ 4
***
No comments:
Post a Comment