Sunday, 5 September 2021

ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa

ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ಪ 


ಕ್ಷೀರಾಬ್ಧಿ ನಿನ್ನದು ಸಂಸಾರಾಬ್ಧಿ ಎನ್ನದಯ್ಯ ಮೂರೇಳವತಾರ ನಿನಗೆ ನೂರೆಂಟು ಎನಗೇ1 

ನಿನಗೆ ಸುರಮುನಿಗಣ ಎನಗೆ ಭೂಸುರಗಣ ನಿನಗೆ ಸತ್ವದ ಗುಣ ಎನಗಾಸೆ ದ್ವಿಗುಣ2 

ಜಗವು ಉದರವೆಂದು ಬಗೆದು ಪೋಪೆನೀ ಜಗದ ಸರ್ವಾರ್ಥವ ಮಿಗೆ ಬಯಸುವೆನಾ 3 

ನಿನಗೆ ಭಕ್ತರೆ ಪ್ರಿಯ ಎನಗೆ ಮುಕ್ತಿಯೆ ದೈವ ನಿನಗೆ ರಕ್ಷಣೆನಾಮಾ ಎನಗೆ ಭಕ್ಷಣೆ ಕಾರ್ಯಾ 4 

ವರಷಡ್ಗುಣವು ನಿನಗೆ ಅರಿಷಡ್ವರ್ಗವು ಯನಗೆ ದುರಿತ ತೃಪ್ತತೆ ಯೆನಗೆ 5 

ನಿನಗೆ ನಾನೆಂಬುದಿಲ್ಲ ಎನಗೆ ನಾನೆಂಬುದುಂಟು ರಂಗನಾಥ ಶ್ರೀಶ ತುಂಗವಿಕ್ರಮ ನೀ 6 

ಕ್ಷಮಿಸೆನ್ನಪರಾಧವ ವಿಮಲಾಂಗ ಮಾಧವ ಕಮಲಾಕ್ಷ ಪೊರೆದೇವ ರಾಮದಾಸನುತಾ 7

***


No comments:

Post a Comment