Sunday, 5 September 2021

ನಲಿದಾಡು ಬಾರೊ ಗರುಡತುರಂಗಾ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa 

ನಲಿದಾಡು ಬಾರೊ ಗರುಡತುರಂಗಾ ಪ 


ದುರುಳ ಭಸ್ಮಾಸುರ ಉರಿಹಸ್ತ ಪಡೆದಂದು ತರುಣಿರೂಪದೆ ನಲಿದು ಹರನ ಪೊರೆದೆಯಲ್ತೆ 1 

ಲೋಲ ಲೋಚನೆಯರ ಆಲಯಗಳ ಪೊಕ್ಕು ಹಾಲು ಬೆಣ್ಣೆಯ ಮೆದ್ದ ಗೋಪಾಲ ವಿಠಲನೇ 2 

(ಭವ ಬಂಧವು ನಾಮಪ್ರಿಯ ಪರಂಧಾಮನೇ) 3 

ಆವ ಬಂಧವನ್ನೂ ಬಿಡಿಸಿ ನವನೀತವೀವನೇ ಕಾವರಿಲ್ಲವೋಯೆನ್ನ ಮಾವಿನ ಕೆರೆರಂಗಾ 4 

ಕಾಮಿತಂಗಳ ದೇವ ಶಾಮಲಾಂಗನೆ ನಿನ್ನ ನಾಮವ ನೆರೆಸಾರು ರಾಮದಾಸಾರ್ಚಿತ 5

***


No comments:

Post a Comment