Sunday, 5 September 2021

ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ankita ramadasa.a

ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa 

ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ಪ 


ಮರೆವೆಯೇತಕೋ ಲೋಲ ಬಾರೋ ಬಾರೋ ಗಾನಲೋಲ ಅ.ಪ 


ಪರಿಪರಿಯಾ ಜನುಮಾಂತರ ಸರಣಿಯೊಳಾನು ಜನಿಸಿ ಸೊರಗಿ ಸೊರಗಿ ಮರುಗಿ ತಿರುಗಿದೆ 1 

ನೆಲೆಸಲಿಕೆ ಸ್ಥಳವು ಇಲ್ಲವೋ [ಕಲಿ]ಕಾಲಪಾಶ ಬದ್ಧನಾದೆನೊ 2 

ಜನುಮಕೋಟಿಯೊಳಾದು ಪೋಪುದು ನಾಮ ಸ್ಮರಣೆಯೊಂದಿರಲೋ 3 

ರಾಮದಾಸವಿನುತ ಕೇಶವಾ [ಉದ್ಧರಿಸೋ] ಆವ ಸುಖವು ಬೇಡವೆನಗೆ ಜೀವ ಪೋಗುವಂದು ನಿನ್ನ ಸೇವೆಗೈವ ವರವು ಸಾಕೆಲೈ ಮಾವಿನಕೆರೆಯರಸ 5

***


No comments:

Post a Comment