Showing posts with label ಹೊಸ ಪರಿಯೇ ರಂಗ ಹೊಸ ಪರಿಯೇ ಕೃಷ್ಣ purandara vittala. Show all posts
Showing posts with label ಹೊಸ ಪರಿಯೇ ರಂಗ ಹೊಸ ಪರಿಯೇ ಕೃಷ್ಣ purandara vittala. Show all posts

Friday, 6 December 2019

ಹೊಸ ಪರಿಯೇ ರಂಗ ಹೊಸ ಪರಿಯೇ ಕೃಷ್ಣ purandara vittala

ರಾಗ ಶಂಕರಾಭರಣ ಅಟತಾಳ

ಹೊಸ ಪರಿಯೇ ರಂಗ, ಹೊಸ ಪರಿಯೇ ಕೃಷ್ಣ
ಶಶಿಧರವಂದ್ಯನೆ, ಕುಸುಮಜ ಜನಕನೆ ||

ತಮ್ಮಗೆ ನೀ ಮತ್ತೆ ತಮ್ಮನಾದೆ ರಂಗ, ತಮ್ಮನ ಮಗಳ ಮದುವ್ಯಾದೆ
ಬ್ರಹ್ಮಗೆ ನೀ ಪರಬ್ರಹ್ಮನಾದೆ ರಂಗ, ನಿಮ್ಮಗಗೆ ಮೈದುನನಾದೆ ||

ಮಾವನ ಮಗಳ ಮದುವ್ಯಾದೆ ರಂಗ, ಮಾವಗೆ ಮತ್ತೆ ನೀ ಮಾವನಾದೆ
ಭಾವಗೆ ನೀ ಸಖ ಭಾವನಾದೆ ರಂಗ, ಭಾವಗೆ ಭವಣೆಯ ಪಡಿಸಿದೆ ರಂಗ ||

ಅತ್ತೆಯ ಅರ್ತಿಯಿಂದಲಿ ಕೂಡಿ, ಅತ್ತೆಯ ಮಗಳ ನೀ ಮದುವ್ಯಾದೆ
ಮತ್ತೊಬ್ಬರಿಗುಂಟೆ ಈ ಪರಿ ಮಹಿಮೆ, ಉತ್ತಮ ಪುರಂದರವಿಠಲಗಲ್ಲದೆ ||
***

pallavi

hosa pariyE ranga hosa pariyE krSNa shashidhara vandyane kusumaja janakane

caraNam 1

tammage nI matte tammanAde ranga tammana magana maduvyAde
brahmage nI parabrahmanAde ranga nimmagage maidunanAde

caraNam 2

mAvana magaLa maduvyAde ranga mAvage matte nI mAvanAde
bhAvage nI sakha bhAvanAde ranga bhAvage bhavaNeya paDiside ranga

caraNam 3

atteya artiyindali kUDi atteya magaLa nI maduvyAde
mattobbariguNTe I pari mahime uttama purandara viTTalagallade
***