ರಾಗ : ಮುಖಾರಿ ತಾಳ : ಅಟ್ಟ
ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು ।।ಪ।।
ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ ।।ಅ.ಪ॥
ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗ
ಬೇರೊಂದು ಲಿಂಗ ಬೆಲೆ ಮಾಡಿ ತಂದು
ತೋರುವಂಗೈಲಿಟ್ಟು ತೋಯಪುಷ್ಪನ ನೀಡಿ
ಯಾರ ಮನಕೊಪ್ಪಿಸುವರೀ ಶೀಲವಂತರು ।।೧।।
ಲಿಂಗವೊಂದು ತನ್ನೊಳು ಲೀನವಾಗಿರುವಾಗ
ಅಂಗಭವಿಗಳು ಕೂಡಿ ಆಡಿಕೊಂಬರು
ಅಂಗದನುಭಾವದರ್ಥವನರಿಯದ ಇಂತಹ
ಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ ।।೨।।
ನಾಗಲಿಂಗ ತನ್ನೊಳು ನಾಟ್ಯವಾಡುತಿರಲು
ಆಗಮಿಸಿದ ಲಿಂಗವ ಬೆದಕಲೇತಕ್ಕೆ
ಕಾಗಿನೆಲೆಯಾದಿಕೇಶವನೆ ನಾಗಶಯನ
ನಾಗಿರಲು ಬೇರೊಂದನರಸಲೇತಕೆ ।।೩।।
***
Kelirai sivasaranaru helalanjike Avudu ||pa||
Balanetrana baktarintu nodikollirai ||a.pa||
Murulinga tannolu mukyavagiruvaga
Berondu linga bele madi tandu
Toruvangailittu toyapushpana nidi
Yara manakoppisuvari silavantaru ||1||
Lingavondu tannolu linavagiruvaga
Angabavigalu kudi adikombaru
Angadanubavadarthavanariyada intaha
Bangi huccarella Sivana Baktarahare ||2||
Nagalinga tannolu natyavadutiralu
Agamisida lingava bedakaletakke
Kagineleyadikesavane nagasayana
Nagiralu berondanarasaletake ||3||
***