ರಾಗ ಅಠಾಣ ಖಂಡಛಾಪುತಾಳ
1st Audio by Mrs. Nandini Sripad
ಏನು ಕಾರಣ ಬಾಯ ತೆರೆದಿ ಪೇಳೆಲೊ ।
ದಾನವಾಂತಕ ಅಹೋಬಲ ನಾರಸಿಂಹನೆ ॥ ಪ ॥
ನಿಗಮ ಚೋರಕನ ಕೊಲಲು ತೆರೆದೆಯೋ ಬಾಯ ।
ನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೋ ಬಾಯ ಭೂ - ।
ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯ ।
ಜಗವರಿಯೆ ಪೇರುರವಿರಿದ ಪ್ರಹ್ಲಾದವರದ ।
ಅಹೋಬಲ ನಾರಸಿಂಹನೆ ॥ 1 ॥
ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ ।
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ ।
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ ।
ಮಲೆತು ಮಾವನ ಕೊಂದು ನಿಂದೆ ಇಂಥ ।
ಇಳಿಯಬಾರದ ಭೂಮಿಗಿಳಿದ ನಾರಸಿಂಹನೆ ॥ 2 ॥
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ ।
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ ।
ಮಾರಪಿತ ಕಾಗಿನೆಲೆಯಾದಿಕೇಶವ ರಂಗ ।
ಧೀರ ಶ್ರೀನಾಥ ಭವನಾಶ ಪೇಳೋ ।
ಪೇಳಿಲ್ಲೇತಕೆ ಅಹೋಬಲ ನಾರಸಿಂಹನೆ ॥ 3 ॥
***********
ಏನು ಕಾರಣ ಬಾಯಿ ತೆರೆದಿ -
ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ||ಪ||
ನಿಗಮ ಚೋರನ ಕೊಲಲು ತೆರೆದೆಯೋ
ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ
ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ
ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದ
ಅಹೋಬಲ ನಾರಸಿಂಹನೆ ||1||
ಬಲಿಯ ದಾನವ ಬೇಡಲೆಂದು ತೆರೆದೆಯೊ
ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ
ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ
ಬಾಯಮರೆತು ಮಾವನ ಕೊಂದು ನಿಂದೆ -
ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ ||2||
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ
ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯಮಾರಪಿತ
ಕಾಗಿನೆಲೆಯಾದಿಕೇಶವ ರಂಗಧೀರ ಶ್ರೀನಾಥ ಭವನಾಶ
ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ ||3||
***
yenu kaarana baaya theredhiyo
dhaanavanthaka ahobala naarasimha||
nigama chorakana kololu theredheyo baaya
nagava benneli potthu nadugi theredheyo baaya
bhoomigallanna kondhu balali theredhayo baaya
jagavariye perura viridha prahladha varadha narasimha||1||
baliya dhanava bedalendhu theredhayo baaya
kaladhindha krutiyara kolalu theradhayo baaya
kulasathiya arasi kaanadhe theradhayo baaya
malethu maavana kondu ninte inthaa bhoomigilidha narasimha||2||
naariyaru cheluvikeya nodi theradhayo baaya
yeri ashwatha metti alali theradheyo baaya
maarapitha kaginele adhi keshava ranga
dheera srinatha bhava naasha pelo narasimhaa||3||
***