Showing posts with label ಮದನ ಮೋಹನ ಮಾಮನೋಹರ ಶ್ರೀದೇವ mahipati. Show all posts
Showing posts with label ಮದನ ಮೋಹನ ಮಾಮನೋಹರ ಶ್ರೀದೇವ mahipati. Show all posts

Wednesday, 1 September 2021

ಮದನ ಮೋಹನ ಮಾಮನೋಹರ ಶ್ರೀದೇವ ankita mahipati

ಮದನಮೋಹನ ಮಾಮನೋಹರ ಶ್ರೀದೇವ ಸಾಧುಪಾಲನಕಾಗಿ ಬಂದು ಮೇದಿನಿಯ ಭಾರಿಳುಹಿದೆ ಪ  


ಬಂದು ಯದುಕುಲದಲಿ ಜನಿಸಿದೆ ಶ್ರೀ ಕೃಷ್ಣನು ಪೂತಣಿ ನಂದಗೋಕುಲಲ್ಯಾಡಿದೆ ಮಂದರಧರ ಸುಂದರರೂಪ ಮುಕುಂದ ವೃಂದಗೋಪರ ನಂದದಲಿ ಕೂಡಿ ಚಂದ ಚಂದದಲ್ಯಾಡಿದೆ1 

ದೇವಕೀ ಕಂದ ದೇವಾಧಿದೇವ ಗೋವಿಂದ ಹಾವನ್ಹಿಡಿದಿ ನೀ ಮೆಟ್ಟಿ ಫಣಿಯಲಿ ಮಾವನ ಮರ್ದಿಸಿದೆ ಸಾವಿರನಾಮ ಪಡೆದ ನೀ ಪೂರ್ಣ ಶ್ರೀಹರಿ ದೇವ ಇಂದ್ರನು ಮಳಿಯಗರೆ ಗೋವರ್ಧನವ ನೀನೆತ್ತಿದೆ 2 

ವಿದುರವಂದ್ಯ ಸದಾ ಪಾಂಡವಪಕ್ಷ ಶ್ರೀಧರ ನಿರ್ಮಿಸಿ ಮಡುಹಿದೆ ವಾಸುದೇವ ನಮ್ಮಯ್ಯ ಮಹಿಪತಿಯ ಘನಸುಖದಾಯಕ 3

***