ವಸಂತ & ಅನಂತ ಲಕ್ಷ್ಮಣ್ ರಾವ್ ಕುಲಕರ್ಣಿ Toravi Temple Dec 29, 2021
ಮುದ್ದು ತಾರೋ ,ರಂಗ, ಎದ್ದು ಬಾರೋ ||ಪ||
ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ||
ವಿಷವನುಣಿಸಲು ಬಂದ
ಅಸುರೆ ಪೂತನಿಯ ಕೊಂದೆ
ವಶವಲ್ಲವೊ ಮಗನೆ ನಿನ್ನ
ವಿಷವನುಂಡ ಬಾಯೊಳೊಮ್ಮೆ ||
ಕಡೆವ ಸಮಯದಿ ಬಂದು
ಕಡೆವ ಸತಿಯ ಕೈಯ ಪಿಡಿದು
ಕಡೆದ ಬೆಣ್ಣೆ ಮೊಸರನೆಲ್ಲ
ಒಡನೆ ಮೆದ್ದ ಬಾಯೊಳೊಮ್ಮೆ ||
ತೊರವೆಯ ನಾರಸಿಂಹ
ವರದ ಪುರಂದರವಿಠಲ
ಹರವಿಹಾಲನೆಲ್ಲ ಕುಡಿದ
ನೊರೆ ಹಾಲಿನ ಬಾಯೊಳೊಮ್ಮೆ ||
***
ರಾಗ ಧನಶ್ರೀ. ಆದಿ ತಾಳ (raga, taala may differ in audio)
pallavi
muddu tArO ranga eddu bArO
anupallavi
andavAda karpUrada karDigeya bAyoLomme
caraNam 1
viSavanuNisalu banda asure pUtaniya konde
vashavallavo magane ninna viSavanuNDa bAyoLomme
caraNam 2
kaDeva samayadi bandu kaDeva satiya kaiya piDidu
kaDeva beNNe mosaranella oDane medda bAyoLomme
caraNam 3
toreveya nArasimha varada purandara viTTala
haravihAlanella kuDida nore hAlina bAyoLomme
***ಮುದ್ದು ತಾರೊ ಕೃಷ್ಣ ಎದ್ದು ಬಾರೊ |
ಶುದ್ಧವಾದ ಕರ್ಪುರದ ಕರಡಿಗೆಯ ಬಾಯಲೊಮ್ಮೆ ಪ
ಕಡೆಯುವ ಸಮಯಕೆ ಬಂದು ಕಡೆವಸತಿಯ ಕೈಯಪಿಡಿದು |ಬಿಡದೆ ಹೊಸ ಹೊಸ ಬೆಣ್ಣೆಯನು ಒಡನೆಮೆಲುವ ಬಾಯಲೊಮ್ಮೆ 1
ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯಲೊಮ್ಮೆ 2
ಪುರಂದರವಿಠಲನೆ ತೊರವೆಯ ನಾರಸಿಂಹ |ಹರವಿಯ ಹಾಲ ಕುಡಿದು ಸುರಿವ ಜೊಲ್ಲ ಬಾಯಲೊಮ್ಮೆ 3
**

JUST SCROLL DOWN FOR OTHER DEVARANAMA