Showing posts with label ಉಗಾಭೋಗಗಳು ugabhoga. Show all posts
Showing posts with label ಉಗಾಭೋಗಗಳು ugabhoga. Show all posts

Tuesday, 1 December 2020

ಉಗಾಭೋಗಗಳು ugabhoga

 


ದಾಸ ಸಾಹಿತ್ಯದ ಪ್ರಕಾರಗಳಲ್ಲಿ ಉಗಾಭೋಗ

         ದಾಸ ಸಾಹಿತ್ಯದ ಪ್ರಕಾರಗಳಲ್ಲಿ ಉಗಾಭೋಗ ದ ಸ್ಥಾನ ಬಹಳ ಉತ್ಕೃಷ್ಟವಾದದ್ದು.. ಇದರಲ್ಲಿ ಮಾತು ಕಡಿಮೆ ಅರ್ಥ ಹೆಚ್ಚಾಗಿರುತ್ತದೆ.. ಈ ಸಣ್ಣ ಕೃತಿಯಲ್ಲೇನೇ ಅಗಾಧವಾದ ಅರ್ಥ ತುಂಬಿರ್ತದೆ... ಉಗಾಭೋಗ ಎನ್ನುವ ಹೆಸರನ್ನು  ಬಳಿಸದೇ ಇದ್ದರೂ ಶ್ರೀ ವಿಜಯದಾಸಾರ್ಯರ ಪದವೊಂದಲ್ಲಿ ಶ್ರೀ ಪುರಂದರದಾಸರು ಸಾವಿರಾರು ಉಗಾಭೋಗಗಳ ರಚಿಸಿದ್ದಾರೆಂದು ತಿಳಿದು ಬರ್ತದೆ.. ಈ ಉಗಾಭೋಗ ಎನ್ನುವ ಹೆಸರು 13 ನೇ ಶತಮಾನದಲ್ಲಿ ಶಾಜ್ಙದೇವನ ಕಾಲದಿಂದ ಬಳಕೆಯಲ್ಲಿದೆ ಎಂದು ಹೇಳ್ತಾರೆ..  

       ಉಗಾಭೋಗಗಳಲ್ಲಿ ನೇರವಾದ ಮಾತು, ಸರಳವಾದ ನಿರೂಪಣೆ, ಪದ ಜೋಡಣೆಯ ಸೊಬಗು ಬಲು ಮನೋಹರ.. 

       ಉಗಾಭೋಗ ಪದವನ್ನು ಕೆಲವರು ಉಕ್ + ಆಭೋಗ ಎನ್ನುವುದಾಗಿ ಬಿಡಿಸಿಕೋತಾರೆ... ಉಗಾಭೋಗಗಳಿಗೆ ರಾಗ-ತಾಳದ ಪ್ರತ್ಯೇಕ  ನಿಯಮವಿಲ್ಲದೇ ಇದ್ದರೂ,  ಉದ್ಗ್ರಾಹ, ಮೇಲಾಪಕ, ಧ್ರುವ, ಅಂತರಾ, ಆಭೋಗ ಎನ್ನುವ ಸಂಗೀತದ ಪಂಚಧಾತುಗಳಿಂದ ಕೂಡಿದ್ದಾಗಿ ಉದ್ಗ್ರಾಹಾಭೋಗ ಆಗಿ ನಂತರದಲ್ಲಿ ಉಗಾಭೋಗ ಆಗಿದೆ... ಆದ್ದರಿಂದ ಸಂಗೀತ ಪ್ರಧಾನವಾದದ್ದೂ ಹೌದು.
 
        ಶ್ರೀ ಸುಳಾದಿಕುಪ್ಪೇರಾಯರು 
100 - ಕೀರ್ತನೆಗಳು = ಒಂದು ಸುಳಾದಿ ಎಂತಲೂ
100 ಸುಳಾದಿ = ಒಂದು ಉಗಾಭೋಗ ಎಂದು  ಉಗಾಭೋಗದ ಔನ್ನತ್ಯವನ್ನು ತಿಳಿಸಿದ್ದಾರೆ...

 ಅನುಭವದ ಭಾವ ಉಕ್ಕೇರಿದಾಗ ನುಡಿಮುತ್ತಿನಂತ ಉಗಾಭೋಗ ಹೊರಹೊಮ್ಮಿ ಬರುತ್ತದೆ... ಅಂತ ಹೇಳ್ತಾರೆ...

 ಆದ್ಯರಿಂದ ಪ್ರಾರಂಭವಾದ, ಶ್ರೀ ಶ್ರೀಪಾದರಾಜರಿಂದ ಖ್ಯಾತಗೊಂಡ ಈ ಪ್ರಕಾರ ಇವತ್ತಿನ ದಾಸದಾಸರ ರಚನೆಗಳಲ್ಲಿಯೂ ಕಂಡು ಬರುತ್ತದೆ ಅಂದರೇ ಅತಿಶಯೋಕ್ತಿಯಲ್ಲ... 

   ಒಟ್ಟಿನಲ್ಲಿ ಉಗಾಭೋಗ ಎಂದರೇ 
ಮಿತವಾದ  ಮಾತು
ಹಿತವಾದ ಸ್ಮರಣೆ
ಉತ್ಕಟವಾದ ಅನುಭವ ಇವುಗಳಿಂದ ಕೂಡಿದ್ದಾಗಿ ಪರಮಾತ್ಮನ ಗುಣಗಾನವನ್ನು ಮನಸಿಗೆ ಮುಟ್ಟುವಂತೆ ಮಾಡುವುದರಲ್ಲಿ ಸಣ್ಣ ಕೃತಿಯಾದರೂ ದೊಡ್ಡ ಸ್ಥಾನವನ್ನು ಪಡೆದಿದ್ದವೆ.. ಇಂಥಹಾ ಅದ್ಭುತವಾದ  ಹರಿದಾಸ ಸಾಹಿತ್ಯದ ಪ್ರಕಾರವಾದ ಉಗಾಭೋಗಗಳ ಗಾಯನವನ್ನು ನಾವು ಬಿಡದೇ ಮಾಡುವಂತಾಗಲೀ... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
***