Showing posts with label ಬಾ ಬಾ ವೇಂಕಟಾಚಲ ವಿಹಾರ vijaya vittala. Show all posts
Showing posts with label ಬಾ ಬಾ ವೇಂಕಟಾಚಲ ವಿಹಾರ vijaya vittala. Show all posts

Thursday, 17 October 2019

ಬಾ ಬಾ ವೇಂಕಟಾಚಲ ವಿಹಾರ ankita vijaya vittala

ಬಾ ಬಾ ಭಕುತರ ಹೃದಯ ಮಂದಿರ
ಬಾ ಬಾ ಜಗದೋದ್ಧಾರ ||pa||

ಬಾ ಬಾ ವೇಂಕಟಾಚಲ ವಿಹಾರ
ಬಾ ಬಾನೇಕಾವತಾರ ಧೀರ-ಶೂರ||a.pa||

ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ
ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ
ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವ ಪಕ್ಷ
ಅಕ್ಷಯವಂತ ಸೂಕ್ಷ್ಮಾಂಬರ ಧರಾ-
ಧ್ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೇರ ತಕ್ಷಣದಲಿ ತಂದ
ಅಕ್ಷರ ಪುರುಷ ಗೋವಿಂದ ||1||

ಜಾಂಬೂನಾದಾಂಬರ ಸಾಂಬಜನಕ-ನೀ
ಲಾಂಬುದ ವರ್ಣಸುಪೂರ್ಣ
ಸಾಂಬವಿನುತ ಸುಗುಣಾಂಬುಧಿ ನಾನಾ ವಿ
ಡಂಬನ ತೋರಿದ ಮಹಿಮ
ಕಾಂಬುವೆ ನಿನ್ನ ಚರಣಾಂಬುಜ ಮನದೊಳು
ಜಾಂಬುವಂತನ ಪರಿಪಾಲಾ ವಿ-
ಶ್ವಂಭರಂಬರಗ್ಗಣಿಯ ಪಡೆದ ವೃ-
ತ್ತುಂಬರೇಶಾಂಬುಧಿ ಶಾಯಿ ||2||

ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ
ಕಾಳೆ ಹೆಗ್ಗಾಳೆ ತಮ್ಮಟಿ ನಿ-
ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ
ಕಂಬುಡಿಕ್ಕಿ ವಾದ್ಯ
ಸೂಳೈಸುತಲಿರೆ ಭಾಗವತರು ಸಂ
ಮೇಳದಿ ಕುಣಿದೊಲಿದಾಡೆ
ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ
ಢಾಲುಗಳು ಒಪ್ಪಿರಲು||3||

ಹಂಸವಾಹನ ಕ್ರತುಧ್ವಂಸಿ ಸುಮನಸೋ
ತ್ತಂಸ ಕೃಶಾನು ಪಾಪಿಗಳ
ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ
ಕೌಂಶಿಕಾಪತಿಯು ಧನವ
ಅಂಶಮಾಲಿ ಸೋಮಕಂಶಿಕಮುನಿ ಪರಮ
ಹಂಸರು ಅಲ್ಲಲ್ಲಿ ನಿಂದು
ಸಂಶಯ ಮಾಡದೆ ಸಮ್ಮೊಗರಾಗಿಹರು
ಕಂಸಾರಿ ತ್ರಿಗುಣಾತೀಶ ||4||

ಮೂರು ನಾಮಂಗಳ ಧರಿಸಿದ ದಾಸರು
ವೀರ ಮಾರುತಿ ಮತದವರು
ಸಾರುತ್ತ ಬೊಮ್ಮಾದಿ ಸುರರುಗಳನ್ನು
ತಾರತಮ್ಯದಿಂದ ತಿಳಿದು
ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದ
ವಾರಿಧಿಯಲಿ ಮಗ್ನರಾಗಿ
ತಾರರು ಮನಸಿಗೆ ಮುರಡು ದೇವತೆಗಳ
ಸಾರ ಹೃದಯರು ನಿಂದಿಹರು ||5||

ಅಂದು ಬಲೀಂದ್ರನ್ನ ದ್ವಾರದಿ ನೀನಿರೆ
ಮಂದಮತಿಯು ರಾವಣನು
ಬಂದು ಕೆಣಕೆ ನಗುತ ಮಹಾಲೀಲೆ
ಯಿಂದಲಿ ನೀನಾ ಖಳನ
ಒಂದು ಶತಯೋಜನ ತಡಮಾಡದಲೆ ನೀ
ಹಿಂದಕ್ಕೆ ಬೆರಳಲ್ಲಿ ಒಗೆದೆ
ಇಂದು ನಿನಗೆ ಈ ರಥವ ನಡೆಸುವುದು
ಅಂದವಾಗಿಹುದೇನೊ ದೇವ||6||

ಬಂಗಾರ ರಥದೊಳು ಶೃಂಗಾರವಾದ ಶ್ರೀ
ಮಂಗಳಾಂಗ ಕಳಿಂಗ
ಭಂಗ ನರಸಿಂಗÀ ಅಂಗಜ ಜನಕ ಸಾ-
ರಂಗ ರಥಾಂಗ ಪಾಣಿ
ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲ-
ವಂಗ ನಾಯಕ ಪರಿಪಾಲ
ಸಂಗೀತ ಲೋಲ ಗೋಪಾಂಗನೆಯರ ಅಂತ-
ರಂಗ ಸಂತಾಪ ವಿದೂರ ||7||

ತಡಮಾಡಲಾಗದೊ ಪೊಡವೀಶ ನೀನಿಂದು
ತಡೆಯದಲೆ ಪೊರಟರೆ
ತಡೆವರಿನ್ನಾರೈಯ ವಡೆಯ ವೇದವೇದ್ಯ
ಕಡೆಗಣ್ಣಿನಿಂದ ನೋಡಿದಲೆ
ನಡೆವುದು ನುಡಿವುದು ಅಡಿಗಡಿಗೆ ನೀನು
ಬಿಡದೆ ಒಳಗೆ ಹೊರಗಿದ್ದು
ಸಡಗರ ದೈವವೆ ನುಡಿಯ ಲಾಲಿಸುವುದು
ವಡನೊಡನೆ ಪಾಲಿಸುತ್ತ||8||

ಹತ್ತವತಾರದ ಹರಿಯೆ ಘನಸಿರಿಯೆ
ಮತ್ತೊಬ್ಬರನು ಹೀಗೆ ಕರೆಯೆ
ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ-
ನ್ಹತ್ತಿಲಿ ಆಡುವ ಮರಿಯೆ
ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ
ಎತ್ತನೋಡಲು ನಿನಗೆ ಸರಿಯೆ
ಅತ್ತಿತ್ತ ಪೋಗದೆ ಇತ್ತ ಬಾರೈಯ ಎ-
ನ್ಹತ್ತಿಲಿ ವೆಂಕಟದೊರೆಯ ||9||
******