Showing posts with label ರಾಘವೇಂದ್ರ ಗುರುರಾಯ ಸಲಹಬೇಕಯ್ಯ ramachandra vittala. Show all posts
Showing posts with label ರಾಘವೇಂದ್ರ ಗುರುರಾಯ ಸಲಹಬೇಕಯ್ಯ ramachandra vittala. Show all posts

Monday, 6 September 2021

ರಾಘವೇಂದ್ರ ಗುರುರಾಯ ಸಲಹಬೇಕಯ್ಯ ankita ramachandra vittala

 ರಾಗ: ಸಾವೇರಿ ತಾಳ: ಆದಿ/ಮಟ್ಟ

ರಾಘವೇಂದ್ರ ಗುರುರಾಯ ಸಲಹಬೇಕಯ್ಯ


ನೀಗಿಸು ಭವರೋಗ ನಿತ್ಯ ಬಾಗಿಸು ಸಜ್ಜನರ ಪಾದಕೆ


ನೂರುಸಾವಿರಕೋಟಿ ಸಂಖ್ಯೆಗೆ

ಮೀರಿದ ಬಹುವಿಧ ಜನರಿಗೆ 

ಹಾರೈಸಿ ಬೇಡಿಕೊಂಡಂಥ ವರವಕೊಟ್ಟು ಅವರ 

ಸಾರೆಗೆರೆದು ಪಾಲಿಸುವಂಥ ಪರಿವಾರಜನರಿಗೆ 

ಆರುರಸದನ್ನವನೆ ಕೊಡುವಂಥ ಜಗದೊಳಗೆ ಅತಿಶಯ 

ವಾರಿಜಾಕ್ಷನೆಂಬಂಥ ಮಹಿಮೆ ನೋಡಿ

ಕೀರುತಿಗೆ ಮರುಳಾಗಿ ನಮಿಸಿದೆ 

ಗಾರುಮಾಡದೆ ಹತ್ತಿರಕರೆಯೊ 1

ರಾಮನೆ ನಿಮ್ಮೊಳು ನಿಂದು 

ಪ್ರೇಮದಿ ಪೂಜೆಯನುಕೊಂಡು

ಭೂಮಿಯೊಳು ನಿಮ್ಮನ್ನೆ ಮೆರೆಸುವ ಕಾಮಿತಜನರಿಗೆ 

ನೇಮದಿಂದಲಿ ವರವ ಕೊಡುವ ಸ್ವರ್ಗಾದಿಂದ 

ಕಾಮಧೇನ್ವಾದಿಗಳ ತಾ ತರಿಸುವನಾ ಬೇಡಿಕೊಂಬೆನೊ 

ಪ್ರೇಮದಿ ಕೊಡು ಎನಗೆ ನೀ ವರವ

ಧೀಮಂತನೆ ದಯವಂತನೆ ಶ್ರೀ-

ರಾಮಪದಸರಸಿಜಭೃಂಗನೆ 2

ಶ್ರೀಮನೋಹರನಂಘ್ರಿಕಮಲವ 

ನೇಮದಿಂದಲಿ ಸ್ತೋತ್ರ ಮಾಡುವ

ಧೀಮಂತರು ತಾವೆ ಕಾರುಣ್ಯ ಎನಗೊಲಿದು ಮಾಡಲು

ಈ ಮಹಾವರವೀಯಲು ಧನ್ಯಾ ನಾನೇನ ಬಲ್ಲೆನೊ

ಭೂಮಿಯಯೊಳಗಿದ್ದ ಧನಧಾನ್ಯ ಅಸ್ಥಿರವೆಂಬುವ

ನೇಮ ಬಲ್ಲೆನೊ ಕುಜನರೊಳು ಮಾನ್ಯ ನೀ ಕೊಡಲಿಬೇಡ

ರಾಮಚಂದ್ರವಿಠಲನಪದ 

ತಾಮರಸ ಹೃತ್ಕಮಲದಲಿ ತೋರೊ 3

****