ರಾಗ: ಸಾವೇರಿ ತಾಳ: ಆದಿ/ಮಟ್ಟ
ರಾಘವೇಂದ್ರ ಗುರುರಾಯ ಸಲಹಬೇಕಯ್ಯ ಪ
ನೀಗಿಸು ಭವರೋಗ ನಿತ್ಯ ಬಾಗಿಸು ಸಜ್ಜನರ ಪಾದಕೆ ಅ
ನೂರುಸಾವಿರಕೋಟಿ ಸಂಖ್ಯೆಗೆ
ಮೀರಿದ ಬಹುವಿಧ ಜನರಿಗೆ
ಹಾರೈಸಿ ಬೇಡಿಕೊಂಡಂಥ ವರವಕೊಟ್ಟು ಅವರ
ಸಾರೆಗೆರೆದು ಪಾಲಿಸುವಂಥ ಪರಿವಾರಜನರಿಗೆ
ಆರುರಸದನ್ನವನೆ ಕೊಡುವಂಥ ಜಗದೊಳಗೆ ಅತಿಶಯ
ವಾರಿಜಾಕ್ಷನೆಂಬಂಥ ಮಹಿಮೆ ನೋಡಿ
ಕೀರುತಿಗೆ ಮರುಳಾಗಿ ನಮಿಸಿದೆ
ಗಾರುಮಾಡದೆ ಹತ್ತಿರಕರೆಯೊ 1
ರಾಮನೆ ನಿಮ್ಮೊಳು ನಿಂದು
ಪ್ರೇಮದಿ ಪೂಜೆಯನುಕೊಂಡು
ಭೂಮಿಯೊಳು ನಿಮ್ಮನ್ನೆ ಮೆರೆಸುವ ಕಾಮಿತಜನರಿಗೆ
ನೇಮದಿಂದಲಿ ವರವ ಕೊಡುವ ಸ್ವರ್ಗಾದಿಂದ
ಕಾಮಧೇನ್ವಾದಿಗಳ ತಾ ತರಿಸುವನಾ ಬೇಡಿಕೊಂಬೆನೊ
ಪ್ರೇಮದಿ ಕೊಡು ಎನಗೆ ನೀ ವರವ
ಧೀಮಂತನೆ ದಯವಂತನೆ ಶ್ರೀ-
ರಾಮಪದಸರಸಿಜಭೃಂಗನೆ 2
ಶ್ರೀಮನೋಹರನಂಘ್ರಿಕಮಲವ
ನೇಮದಿಂದಲಿ ಸ್ತೋತ್ರ ಮಾಡುವ
ಧೀಮಂತರು ತಾವೆ ಕಾರುಣ್ಯ ಎನಗೊಲಿದು ಮಾಡಲು
ಈ ಮಹಾವರವೀಯಲು ಧನ್ಯಾ ನಾನೇನ ಬಲ್ಲೆನೊ
ಭೂಮಿಯಯೊಳಗಿದ್ದ ಧನಧಾನ್ಯ ಅಸ್ಥಿರವೆಂಬುವ
ನೇಮ ಬಲ್ಲೆನೊ ಕುಜನರೊಳು ಮಾನ್ಯ ನೀ ಕೊಡಲಿಬೇಡ
ರಾಮಚಂದ್ರವಿಠಲನಪದ
ತಾಮರಸ ಹೃತ್ಕಮಲದಲಿ ತೋರೊ 3
****
No comments:
Post a Comment