ಸಂತ ತುಕಾರಾಂ ಚಿತ್ರ
ಪಿ. ಬಿ. ಶ್ರೀನಿವಾಸ್ ಚಿ|| ಸದಾಶಿವಯ್ಯ ವಿಜಯ ಭಾಸ್ಕರ್
ಜಯತು ಜಯ ವಿಠಲ
ಪಾಂಡುರಂಗ ಪಂಡರೀನಾಥ
ನಿನ್ನ ನಾಮವು ಶಾಂತಿ ಧಾಮವು
ಸೌಖ್ಯದಾರಾಮ|| ಪ ||
ಪಾವನಾಂಗ ಪಂಡರೀನಾಥ
ಪಾದಸೇವಾ ಪುಣ್ಯವಿನೀತ
ಕರುಣಿಸಿ ಬಾರಯ್ಯ
ದರುಶನ ತಾರಯ್ಯ
ನೀ ಎನ್ನ ಭಾಗ್ಯವಯ್ಯ
ಪಾಂಡುರಂಗ, ಪಾಂಡುರಂಗಯ್ಯ || ಜಯತು ||
ಕನಸು ಮನಸಿನ ಜೀವವು ನೀನೆ
ಅಂತರಾತ್ಮನ ಭಾವವು ನೀನೆ
ಅನ್ಯವು ಇಲ್ಲಯ್ಯ
ಎಲ್ಲವು ನೀನಯ್ಯ
ತುಕಾ ಎಂದ ಮಾತಿದಯ್ಯ
ಪಾಂಡುರಂಗ ಪಾಂಡುರಂಗಯ್ಯ || ಜಯತು ||
****