Showing posts with label ವನಜ ಮುಖಿಯರ ಮನದಿಷ್ಟಾರ್ಥವನೀವನ ಶ್ರೀ ಕೃಷ್ಣ neleyadikeshava VANAJA MUKHIYARA MAMADISHTARTHANEEVANA SRI KRISHNA. Show all posts
Showing posts with label ವನಜ ಮುಖಿಯರ ಮನದಿಷ್ಟಾರ್ಥವನೀವನ ಶ್ರೀ ಕೃಷ್ಣ neleyadikeshava VANAJA MUKHIYARA MAMADISHTARTHANEEVANA SRI KRISHNA. Show all posts

Wednesday, 1 September 2021

ವನಜ ಮುಖಿಯರ ಮನದಿಷ್ಟಾರ್ಥವನೀವನ ಶ್ರೀ ಕೃಷ್ಣ ankita neleyadikeshava VANAJA MUKHIYARA MAMADISHTARTHANEEVANA SRI KRISHNA



ರಾಗ -  :  ತಾಳ - 

ವನಜಮುಖಿಯರ ಮನದಿಷ್ಟಾರ್ಥವನೀವ

ಶ್ರೀಕೃಷ್ಣ ಎನ್ನಿರೋ ತನ್ನ

ಮನದೊಳು ನೆನೆದು ಧ್ಯಾನಿಸುವಳ ತಂದಾತನ

ಶ್ರೀಕೃಷ್ಣ ಎನ್ನಿರೋ ll ಪ ll


ಪಣ್ಣಕೊಯಿದವನನುಜಗೆ ಸಹಾಯನಾದನ

ಶ್ರೀಕೃಷ್ಣ ಎನ್ನಿರೋ

ಸಣ್ಣ ಸೆಳೆನಡುವಿನ ಪೆಣ್ಣಾದನ

ಶ್ರೀಕೃಷ್ಣ ಎನ್ನಿರೋ

ಅಣ್ಣನ ವೈರಿಯ ಮಗನ ಕೊಂದಾತನ 

ಶ್ರೀಕೃಷ್ಣ ಎನ್ನಿರೋ

ಬಣ್ಣಿಸಲರಿಯೆ ನಾನಿವನ ಮಹಿಮೆಗಳ ಶ್ರೀಕೃಷ್ಣ ಎನ್ನಿರೋ ll 1 ll 


ಮುತ್ತಯ್ಯನಿರೆ ಮೊಮ್ಮಗೆ ಪಟ್ಟಗಟ್ಟಿದನ 

ಶ್ರೀಕೃಷ್ಣ ಎನ್ನಿರೋ

ಹೆತ್ತವಳಿರೆ ತಾಯ ಬೇರೆ ಪಡೆದಾತನ

ಶ್ರೀಕೃಷ್ಣ ಎನ್ನಿರೋ

ಮತ್ತೇಭಗಾಮಿನಿಗಾಗಿ ವನವಾಸ ಪೋದನ 

ಶ್ರೀಕೃಷ್ಣ ಎನ್ನಿರೋ

ಮತ್ತೆ ಕುವರಗೆ ಕಂಬದಲ್ಲಿ ಮೂಡಿದನ

ಶ್ರೀಕೃಷ್ಣ ಎನ್ನಿರೋ ll 2 ll


ಉಗುರುಕೊನೆಗಳಿಂದ ನಗವ ನೆಗಹಿದನ 

ಶ್ರೀಕೃಷ್ಣ ಎನ್ನಿರೋ 

ಬೊಗಸೆಗಂಗಳ ಬಾಲೆಯರ ತಂದಾತನ

ಶ್ರೀಕೃಷ್ಣ ಎನ್ನಿರೋ

ಮಗಳಗಂಡನ ಶಿರವ ಛೇದಿಸಿದಾತನ

ಶ್ರೀಕೃಷ್ಣ ಎನ್ನಿರೋ

ಸುಗುಣರನ್ನನು ಕಾಗಿನೆಲೆಯಾದಿಕೇಶವನ

ಶ್ರೀಕೃಷ್ಣ ಎನ್ನಿರೋ ll 3 ll

***


ವನಜ ಮುಖಿಯರ ಮನದಿಷ್ಟಾರ್ಥವನೀವನ - ಶ್ರೀ ಕೃಷ್ಣ ಎನ್ನಿರೊಮನು ಮುನಿಜನರನು ಅನುದಿನದೊಳು ಪೊರೆವನ - ಶ್ರೀ ಕೃಷ್ಣ ಎನ್ನಿರೊ ಪ


ಪಣ್ಣ ಕೊಯ್ದನನುಜಗೆ ಸಹಾಯನಾದನ _ ಶ್ರೀ ಕೃಷ್ಣ ಎನ್ನಿರೊಸಣ್ಣ ಸೀರೆಯ ನಲ್ವೆಣ್ಣು ರೂಪಾದನ _ ಶ್ರೀ ಕೃಷ್ಣ ಎನ್ನಿರೊಅಣ್ಣನ ವೈರಿಯ ಮಗನ ಕೊಂದಾತನ _ ಶ್ರೀ ಕೃಷ್ಣ ಎನ್ನಿರೊಬಣ್ಣಿಸಲರಿಯೆ ನಾನಿವನ ಮಹಿಮೆಯ _ ಶ್ರೀ ಕೃಷ್ಣ ಎನ್ನಿರೊ 1


ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ _ ಶ್ರೀ ಕೃಷ್ಣ ಎನ್ನಿರೊಹೆತ್ತವಳಿರೆ ತಾಯ ಬೇರೆ ಪಡೆದಾತನ _ ಶ್ರೀ ಕೃಷ್ಣ ಎನ್ನಿರೊಮತ್ತೇಭಗಾಮಿನಿಗಾಗಿ ವನವಾಸ ಪೋದನ _ ಶ್ರೀ ಕೃಷ್ಣ ಎನ್ನಿರೊಮತ್ತೆ ಹಿರಣ್ಯಕಗೆ ಕಂಬದಲಿ ತೋರ್ದನ - ಶ್ರೀ ಕೃಷ್ಣ ಎನ್ನಿರೊ 2


ಉಗುರು ಕೊನೆಗಳಿಂದ ನಗವನೆತ್ತಿದನ _ ಶ್ರೀ ಕೃಷ್ಣ ಎನ್ನಿರೊಬೊಗಸೆಗಂಗಳ ಬಾಲೆಯರ ತಂದಾತನ _ ಶ್ರೀ ಕೃಷ್ಣ ಎನ್ನಿರೊಮಗಳ ಗಂಡನ ಶಿರವನೆ ಛೇದಿಸಿದನ _ ಶ್ರೀ ಕೃಷ್ಣ ಎನ್ನಿರೊಸುಗುಣ ತನ್ನ ಕಾಗಿನೆಲೆಯಾದಿಕೇಶವನ _ ಶ್ರೀ ಕೃಷ್ಣ ಎನ್ನಿರೊ 3

***