Showing posts with label ಒಂದೇ ಕೂಗಳತೆ ವೈಕುಂಠಕೆ ಸಂದೇಹವಿಲ್ಲವೋ purandara vittala ONDE KOOGALATE VAIKUNTAKE SANDEHAVILLAVO. Show all posts
Showing posts with label ಒಂದೇ ಕೂಗಳತೆ ವೈಕುಂಠಕೆ ಸಂದೇಹವಿಲ್ಲವೋ purandara vittala ONDE KOOGALATE VAIKUNTAKE SANDEHAVILLAVO. Show all posts

Saturday 18 December 2021

ಒಂದೇ ಕೂಗಳತೆ ವೈಕುಂಠಕೆ ಸಂದೇಹವಿಲ್ಲವೋ purandara vittala ONDE KOOGALATE VAIKUNTAKE SANDEHAVILLAVO







 ರಾಗ ಕಲ್ಯಾಣಿ    ಆದಿತಾಳ 
3rd Audio by Mrs. Nandini Sripad

Audio by Vidwan Sumukh Moudgalya

ಒಂದೇ ಕೂಗಳತೆ ಭೂ ವೈಕುಂಠ ॥ ಪ ॥

ಸಂದೇಹವಿಲ್ಲವು ಸಾಧು ಸಜ್ಜನರಿಗೆ ॥ ಅ ಪ ॥

ಅಂಬರೀಷನು ದ್ವಾದಶಿವ್ರತವ ಮಾಡಲು
ಡೊಂಬೆಯ ಮಾಡಿದ ದುರ್ವಾಸನು
ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆ
ಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು ॥ 1 ॥

ಕರಿರಾಜ ವನದಲಿ ಉಳುಹೆಂದು ಕೂಗಲು
ತ್ವರಿತದಿಂದಲಿ ಬಂದು ಕಾಯ್ದ ತಾನು
ಕರುಣಸಾಗರ ಕೃಷ್ಣ ಕಾಯಬೇಕೆನುತಲೆ
ತರಳ ಪ್ರಹ್ಲಾದನ ಕಂಬದಿಂ ಬಂದುದು ॥ 2 ॥

ದ್ರುಪದರಾಯನ ಪುತ್ರಿಗಾಪತ್ತು ಬರಲು
ಕೃಪೆಯಿಂದಲಕ್ಷಯವಿತ್ತನು
ಕಪಟನಾಟಕ ಕೃಷ್ಣ ಪುರಂದರವಿಠಲನ 
ಗುಪಿತದಿ ನೆನೆವರ ಹೃದಯವೇ ವೈಕುಂಠ ॥ 3 ॥
****


ರಾಗ ಕಲ್ಯಾಣಿ ಅಟತಾಳ (raga, taala may differ in audio)

Onde kugalate vaikunthake ||pa||

Sandehavillavo sadhu sajjanarige ||a.pa||

Sarasiyali Ane poreyendu kareyalu
Tvaritadi bandu kayda
Narahari krushna salahendu ciralu
Tarala prahladage kambadindali banda ||1||

Ambarisha dvadasivrata madalu
Dombi madida durvasamuni
Kumbinipati krushna kayendu moreyide
Bembatti chakradi munisapavanu kaleda ||2||

Drupadarayana putriyapatta kaleyene
Krupeyinda akshayavitta tanu
Kapatanataka krushna purandaravithalana
Gupitadi nenevara hrudayave vaikunthavu ||3||
***

pallavi

onde kUgaLate vaikuNTha

anupallavi

sandEhavillavO sAdhu sajjanarige

caraNam 1

sarasiyali Ane poreyendu kareyalu dvaritadi bandu kAida
narahari krSNa salahendu cIralu taraLa prahlAdage kambhadindali banda

caraNam 2

ambarISa dvAdashi vrata mADalu dombi mADida durvAsa muni
kumbhinIpati krSNa kAyendu moreyiDe bembetti cakradim muni shApava kaLeda

caraNam 3

drupada rAyana putriyApatta kaleyene krpeyinda akSayavinda tAnu
kapaTa nATaka svAmi purandra viTTalana gupitadi nenevara vadana vaikuNTha
***

ಒಂದೇ ಕೂಗಳತೆ ವೈಕುಂಠ ||ಪ||

ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ||ಅ||

ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದ
ನರಹರಿ ಕೃಷ್ಣ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಭದಿಂದಲಿ ಬಂದ ||

ಅಂಬರೀಷ ದ್ವಾದಶಿವ್ರತ ಮಾಡಲು
ದೊಂಬಿ ಮಾಡಿದ ದುರ್ವಾಸ ಮುನಿ
ಕುಂಭಿಣೀಪತಿ ಕೃಷ್ಣ ಕಾಯೆಂದು ಮೊರೆಯಿಡೆ
ಬೆಂಬತ್ತಿ ಚಕ್ರದಿಂ ಮುನಿಶಾಪವ ಕಳೆದ ||

ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕಪಟನಾಟಕಸ್ವಾಮಿ ಪುರಂದರವಿಠಲನ
ಗುಪಿತದಿ ನೆನೆವರ ವದನ ವೈಕುಂಠ ||
**********

ರಾಗ : ಕಲ್ಯಾಣಿ   ತಾಳ : ಅಟ್ಟ

ಒಂದೇ ಕೂಗಳತೆ ವೈಕುಂಠಕೆ ॥ಪ॥
ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ॥ಅ.ಪ॥

ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದಾ
ನರಹರಿ ಕೃಷ್ಣಾ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಬದಿಂದಲಿ ಬಂದ ॥೧॥

ಅಂಬರೀಷ ದ್ವಾದಶೀವ್ರತ ಮಾಡಲು
ದೊಂಬಿ ಮಾಡಿದ ದುರ್ವಾಸಮುನಿ
ಕುಂಭಿನೀಪತಿ ಕೃಷ್ಣಾ ಕಾಯೆಂದು ಮೊರೆಯಿಡೆ
ಬೆಂಬತ್ತಿ ಚಕ್ರದಿ ಮುನಿಶಾಪವನು ಕಳೆದ ॥೨॥

ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠವು ॥೩॥
********