Showing posts with label ವಿಜಯರಾಯರ ಪಾದಕಮಲ ಭಜಿಸಲಾಕ್ಷಣ keshavavittala. Show all posts
Showing posts with label ವಿಜಯರಾಯರ ಪಾದಕಮಲ ಭಜಿಸಲಾಕ್ಷಣ keshavavittala. Show all posts

Monday, 2 August 2021

ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ankita keshavavittala

 ವಿಜಯದಾಸರ ಸ್ತೋತ್ರ

ವಿಜಯರಾಯರ ಪಾದಕಮಲ ಭಜಿಸಲಾಕ್ಷಣ ದಿ- |ಗ್ವಿಜಯ ಮಾಡಿ ಸುಜನರನ್ನು ಪೊರೆವನನುದಿನ ಪ

ದಾಸಪ್ಪನೆಂಬ ನಾಮದಿಂದ ಕರೆಸುತ ಉದರ ಗೋಸುಗದಿ ಪರರ ಬಳಿಯ ಆಶ್ರಿಸುತ ||ಯೇಸುಪರಿಯ ಬಡತನವು ಸೋಸಿ ದಣಿವುತ |ಕ್ಲೇಶಗೊಂಡು ಸುಲಿಸಿಕೊಂಡು ಕಾಶಿಗ್ಹೋಗುತ 1

ವಾಸವಾಗಿ ಸನ್ಯಾಸಿ ವೇಷ ಧರಿಸುತ ನಿತ್ಯ ಬ್ಯಾಸರದಲೆ ವ್ರತಗಳು ಉಪವಾಸ ಮಾಡುತ ||ರಾಶಿ ರಾಶಿ ಜನರ ಕೂಡಿ ದೇಶ ಚರಿಸುತ ಮ್ಯಾಲೆಕಾಶಿ ಬಿಟ್ಟು ಸೇತು ರಾಮೇಶನ್ನ ಹುಡುಕುತ 2

ತಿರುಗಿ ತಿರುಗಿ ಚೀಕಲಾಪರಿಗೆ ಬಂದನು ಕಂಡುಗುರುತು ಹಿಡಿದು ಆ ಕ್ಷಣದಿ ಕರೆದು ವೈದ್ಯರು ||ಪರಮ ಸಂತೋಷದಿಂದ ಭರಿತರಾದರು ಮೈನೆರೆದ ಶೋಭನಾದಿಗಳನು ತ್ವರಿತ ಮಾಡ್ದರು 3

ನಿತ್ಯ ಸಂಸಾರದಲ್ಲಾಸಕ್ತರಾಗುತ ದೊಡ್ಡ ಹತ್ತು ಎಂಟು ಗ್ರಾಮವನ್ನು ವತ್ತಿ ಆಳುತಾ ||ಗುತ್ತಿಗೆಯ ಹೊತ್ತ ರೊಕ್ಕ ಮ್ಯಾಲೆ ಬೀಳುತ ಯಿನ್ನುಎತ್ತ ಸೇರಲೆಂದು ಭಾಗೀರಥಿಗೆ ಹೋಗುತ 4

ಕಾಶಿಯೊಳಗೆ ಮಲಗಿರಲು ಸ್ವಪ್ನ ಕಂಡರು ಪುರಂದರ-ದಾಸರೇವೆಂಬುದು ವ್ಯಾಸ ಕಾಶಿಗೊಯ್ದರು ||ಶ್ರೀಶನಿಂದಲಿವರಿಗೆ ಉಪದೇಶ ಕೊಡಿಸೋರು ವಿಜಯ ದಾಸರೆಂದು ಕರೆಸಿರೆನ್ನೆ ಎದ್ದು ಕುಳಿತರು 5

ಕನಸಿನೊಳಗೆ ದೇವರ ದರುಶನಾಗುತ ಶ್ರೀ-ಮನಸಿಜನ ಪಿತನ ದಯವು ಘನ ಘನಾಗುತ ||ಜಿನಸು ಜಿನಸು ಪದ ಸುಳಾದಿಗಳನು ಪೇಳುತ ಆಗನೆನಿಸಿದಾಕ್ಷಣದಲಿ ಮುಖದಿ ಕವಿತ ಹೊರಡುತಾ 6

ಮತ್ತೆ ಹೊರಟು ಆದವಾನಿ ಸ್ಥಳಕೆ ಬಂದರು ಏನುಹತ್ತು ಜನರಿಗೆ ಪೇಳಿದ ವಾಕ್ಯ ಸತ್ಯವೆಂದರು ||ಸುತ್ತು ಮುತ್ತು ನೂರಾರು ದಾಸರು ನೆರೆದರು ಆನಿಸತ್ತಿಗಿ ಪಲ್ಲಕ್ಕಿಯವರೆ ಶಿಷ್ಯರಾದರು 7

ಯಾತ್ರಿ ತೀರ್ಥಗಳನು ಬಹಳ ಚರಿಸಿ ನೋಡುತ ಸ-ತ್ಪಾತ್ರರಲ್ಲಿ ನೋಡಿ ಧರ್ಮಗಳನೆ ಮಾಡುತ ||ರಾತ್ರಿ ಹಗಲು ವಿಜಯ ವಿಠ್ಠಲನೆಂದು ಪಾಡುತ ಜನರಶ್ರೋತ್ರಿಯಿಂದ್ರಿಯಗಳ ಉದ್ಧಾರ ಮಾಡುತ 8

ಪೂರ್ತಿ e್ಞÁನದಿಂದ ಕರ್ಮವೆಲ್ಲ ಕಡಿದರು ಸ-ತ್ಕೀರ್ತಿವಂತರಾಗಿ ಬಹಳ ಖ್ಯಾತಿ ಪಡೆದರು ||ಕಾರ್ತಿಕ ಶುದ್ಧ ದಶಮಿ ದಿವಸ ನಡೆದರು ಶ್ರೀಸತ್ಯರಮಣ ಕೇಶವ ವಿಠಲನ್ನ ಕಂಡರು9

****