Showing posts with label ಕಂಡೀರೇನೆ ಕಂಡೀರೇನೆ ಹಿಂಡು prasannavenkata. Show all posts
Showing posts with label ಕಂಡೀರೇನೆ ಕಂಡೀರೇನೆ ಹಿಂಡು prasannavenkata. Show all posts

Sunday, 10 November 2019

ಕಂಡೀರೇನೆ ಕಂಡೀರೇನೆ ಹಿಂಡು ankita prasannavenkata

by ಪ್ರಸನ್ನವೆಂಕಟದಾಸರು
ಕಂಡೀರೇನೆ ಕಂಡೀರೇನೆ ಹಿಂಡುಗೋಪೇರುಪುಂಡರೀಕವರದ ಶ್ರೀ ಪಾಂಡುರಂಗ ಕೃಷ್ಣಯ್ಯನ ಪ.

ಒಮ್ಮೆ ನಾನಂಜಿಸಿಕೊಂಡರಮ್ಮೆಯನುಣ್ಣದೆ ಹೋದನಮ್ಮ ರಂಗ ಸುಮ್ಮಾನದಿ ಭೀಮರಥಿಯಲಿದ್ದಾನಂತೆ 1

ಎಡಬಲ ನೋಡದಲೆ ನಡೆದ ಕಾರಣವೇನೆಹಡೆದವರ ಮೇಲೆ ತಾ ಕಡುಕೋಪ ಉಚಿತೇನೆ 2

ಗೆಜ್ಜೆ ಘಿಲ್ಲು ಒಡ್ಯಾಣದ ಗುಜ್ಜನ ಕಾಣದೆ ಕಣ್ಣಕಜ್ಜಳ ನೀರಾಗುತಿವೆ ದುರ್ಜನಾರಿ ಕೃಷ್ಣಯ್ಯನ 3

ತಾಯಿತಂದೇರಗಲಿ ತಾನು ಬಯಲೊಳಗೆಂತಿಹನೆಮಾಯದ ಲೀಲೆಯ ನೋಡ್ವ ಬಯಕೆ ಕೈಗೂಡಲಿಲ್ಲ 4

ಆಡುತಾಡುತ ಬತ್ತಲೆ ಓಡಿದ ವಾಜಿಯನೇರಿರೂಢಿಯೊಳ್ಪ್ರಸನ್ವೆಂಕಟ ಒಡೆಯ ವಿಠಲಯ್ಯನ 5
******