ಎನೊ ಎಂತೊ ತಿಳಿಯದು ತಿಳಿಯದು ಸ್ವಾನಂದದ ಸುಖದಾಟ ಪ
ಒಳಗೊ ಹೊರಗೊ ಬೈಗೊ ಬೆಳಗೊ ಕಾಳೊ ಬೆಳದಿಂಗಳವೊ ಮಳಿಯೊ ಮಿಂಚೊ ಹೊಳವೊ ಸಳವೊ ತಿಳಿಯದ ಕಳೆಕಾಂತಿಗಳು 1
ಉದಿಯೊ ಅಸ್ತೊ ಆದ್ಯೊ ಅಂತ್ಯೊ ಮಧ್ಯೋ ತಾ ತಿಳಿಯದು ತುದಿಮೊದಲಿಲ್ಲದೆ ಸದಮಲ ಬ್ರಹ್ಮವು ಉದಿಯವಾಗಿಹ್ಯದು ನೊಡಿ 2
ಜೀವೋ ಭಾವೋ ಶಿವೊ ಶಕ್ತೋ ಆವದು ತಾ ತಿಳಿಯದು ಘವಘವಿಸುವ ಅವಿನಾಶನ ಪ್ರಭೆಯಿದು ಮಹಿಪತಿ ವಸ್ತುಮಯವೊ 3
***