Showing posts with label ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ pranesha vittala. Show all posts
Showing posts with label ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ pranesha vittala. Show all posts

Monday, 11 November 2019

ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ ankita pranesha vittala

by ಪ್ರಾಣೇಶದಾಸರು
ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ |ಮಾಯಾಮಂದಿರನವರ ಕಿಂಕರನು ಯೆನಿಸೇ ಪ

ವ್ಯೋಮಜ ರಮಣಿನಳಿನಭವಜಾತೆಕೃತಿಪುತ್ರೆ |ಸಾಮಜಗಮನೆ ಉರಗವೇಣಿ ಕಾಳೀ ||ಸೋಮಮುಖಿ ಬೇರೊರಸಿ ಯನ್ನ ದುರ್ಮತಿಯಳಿದು |ರಾಮಧ್ಯಾನದಲಿ ಮನ ನಿಲ್ಲಿಸುವದನಿಶ 1


ಲೋಕನಾಯಿಕೆ ಶೈಲಜಾಪತಿ ಮುಖ ಪೂಜಿತಳೆ |ನೀ ಕರುಣದಲಿ ನೋಡಿಕರವಪಿಡಿಯೇ ||ಕಾಕುಮನುಜರ ಸಂಗವನು ಕೊಡದೆಯೊಂದಿನಕು |ಲೌಕಿಕವ ಸಂಪಾದಿಸಿಸಬೇಡವಮ್ಮ 2

ಕೃಷ್ಣೆ ನಳನಂದಿನಿ ದ್ರುಪದ ತನುಜೆ ಶಿವಕನ್ಯೆ |ದುಷ್ಟ ಜನ ಗಿರಿಕುಲಿಶೆ ಸ್ವರ್ಣಗಾತ್ರೆ ||ಕೊಟ್ಟ ಮಾತಿಗೆ ತಪ್ಪದಲೆ ಕಾಯ್ವ ಪ್ರಾಣೇಶ |ವಿಠಲನ ಚರಣಯುಗ ಸರಸೀರುಹ ಭೃಂಗೆ3
*******