Showing posts with label ದಾರಿಯ ತೋರೊ ಮುಕುಂದ ನಾರಾಯಣ ಹರಿ ಗೋವಿಂದ purandara vittala DAARIYA TORO MUKUNDA NARAYANA HARI GOVINDA. Show all posts
Showing posts with label ದಾರಿಯ ತೋರೊ ಮುಕುಂದ ನಾರಾಯಣ ಹರಿ ಗೋವಿಂದ purandara vittala DAARIYA TORO MUKUNDA NARAYANA HARI GOVINDA. Show all posts

Sunday, 5 December 2021

ದಾರಿಯ ತೋರೊ ಮುಕುಂದ ನಾರಾಯಣ ಹರಿ ಗೋವಿಂದ purandara vittala DAARIYA TORO MUKUNDA NARAYANA HARI GOVINDA



ಪುರಂದರದಾಸರು

ದಾರಿಯ ತೋರೊ ಮುಕುಂದ , ನಾರಾಯಣ ಹರಿ ಗೋವಿಂದ ||ಪ||

ಬಂದೆನು ನಾನಾ ಜನ್ಮದಲಿ, ಬಹು, ಬಂಧನದೊಳು ಸಿಲುಕಿದೆನೊ
ಮುಂದಿನ ಪಯಣದ ಗತಿಯೇನೊ, ಇಂದು ನೀ ತೋರೋ ಇಂದಿರೆರಮಣನೆ ||

ಉಕ್ಕಿ ಹರಿವ ನದಿಯೊಳಗೆ, ನಾ ,ಸಿಕ್ಕಿದೆ ನಡು ನೀರೊಳಗೆ
ಕಕ್ಕುಲತೆಯಿಲ್ಲ ನಿನಗೆ, ಬೇಗ, ನೀ ಕೈ ಪಿಡಿದೆನ್ನ ಸಲಹಯ್ಯ ಬಿಡದೆ ||

ಕುಕ್ಷಿಯೊಳಗೆ ನೀ ಬಿಟ್ಟು, ಅಯ್ಯ, ಯಾರಿಗೆ ಉಸಿರುವೆನೊ
ಚಿಂತಿತದಾಯಕ ಕೇಳೊ, ನಮ್ಮ, ಪುರಂದರವಿಠಲನೆ ದಯವಾಗೊ ||
***

ರಾಗ ಪೂರ್ವಿ. ಏಕ ತಾಳ (raga tala may differ in audio)

pallavi

dAriya tOro mukunda nArAyaNa hari gOvinda

caraNam 1

bandenu nAnA janmadali bahu bandhanadoLu silukideno
mundina payaNada gatiyEno indu nI tOrO indire ramaName

caraNam 2

ukki hariva nadiyoLage nA sikkide naDu nIroLage
kakkulateyilla ninage bEga nI kai piDidenna salahayya biDade

caraNam 3

kukSiyoLage nI biTTu ayya yArige usiruveno
cintita dAyaka kELo namma purandara viTTalane dayavAgo
***


ದಾರಿಯ ತೋರೊ ಮುಕುಂದ ಹರಿ-|ನಾರಾಯಣ ಗೋವಿಂದ ಪ

ಬಂದೆನು ಬಹುಜ್ಮನದಲಿ -ನಾ-|ಬಂಧನದೊಳು ಸಿಲುಕುತಲಿ ||ಮುಂದಿನದಾವುದು ಪಯಣ -ತೋರೊ-|ಇಂದುನೀ ಇಂದಿರೆರಮಣ1

ಗತಿಯಿಲ್ಲದವರಿಗೆ ನೀನೆ -ಸದ್-|ಗತಿಯೆಂದು ಸ್ತುತಿಮಾಡಿದೆನೊ ||ಗತಿಯೆಂದು ನಂಬಿದೆ ನಿನ್ನ |ಸತುವ ತೋರು ನರಹರಿಯೆ ಗೋವಿಂದ 2

ಮಡವಿನೊಳಗೆ ಧಮುಕಿದೆನೆ -ಇನ್ನು-ಕಡಹಾಯಿಸುವರ ನಾ ಕಾಣೆ ||ಹಡೆದ ತಾಯಿ - ತಂದೆ ನೀನೆ -ಕೈ-|ಹಿಡಿದು ಸಲಹೊ ಎನ್ನೊಡೆಯ ಮುರಾರಿ 3

ಮಿಕ್ಕಿ ಬರುವ ಹೊಳೆಯೊಳಗೆ -ನಾನು-|ಸಿಕ್ಕಿದೆ ನಡುನೀರೊಳಗೆ ||ಕಕ್ಕುಲಾತಿನಿನಗಿರದೆ |ಭಕ್ತವತ್ಸಲ ನೀ ದಯಮಾಡೋ 4

ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|ರಕ್ಷಿಸಿ ಸಲಹಬೇಕು ||ಅಕ್ಷಯಅನಂತ ಮಹಿಮನೆ - ನೀನು |ಪಕ್ಷಿವಾಹನನೆಪುರಂದರವಿಠಲ5
********