..
ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ಪ
ದಾಸರ ನೆರೆನಂಬಿ ಯೇಸು ಜನ್ಮದ ಭವಪಾಶವ ಹರಿಸಿ ರಮೇಶನ್ನ ಮಹಿಮೆಯಲೇಸಾಗಿ ವಿರಚಿಸಿ ಪರಮೋಲ್ಹಾಸದಲಿ ಜೀ-ವೇಶ ಭೇದವ ಯೇಸು ಬಗೆಯಲಿ ತಿಳಿಯುತಲೆ ನೆರೆ-ದೋಷ ಬುದ್ಧಿಯ ನಾಶಗೈವರ ಅ.ಪ.
ಸಂದರುಶನ ಮಾತ್ರದಿಂದ ಬಾಹೊದು ನದಿಸಿಂಧು ಸ್ನಾನದ ಫಲವೊ ಭಾವಶುದ್ಧದಿಂದ ವಂದನೆ ನಿರುತ ಮಾಡಲು ಭವಬಂಧನವ ಪರಿಹರವು ||(ದುಡುಕು) ಇಂದು ನಿಜವು ಕಂದುಗೊರಳಮ-ರೇಂದ್ರವಂದ್ಯ ಮುಕುಂದನನು ಬಿಡ-ದಂದು ಭಜಿಪ ಪುರಂದರನ ಪದದ್ವಂದ್ವಯುಗಳರವಿಂದ ಮಧುಪರ ನಂದದಲಿ 1
ನರಮಾತ್ರರಿವರೆಂದು ನೆರೆ ತಿಳಿಯದೆ ಸುಂ-ದರವಾದ ಗುಣಗಣಗಳಿಂದಲಿಸಿರಿವರನ ಚರಿತೆಯು ನಮಗೆ ಬಂದ ಕಂಟಕ ಬಂಧಹರವೆಂದು ಮನದಲ್ಲಿ ನೆರೆ ತಿಳಿದರಿಂದ ||
(ದುಡುಕು) ಪರಮ ಧನ್ಯರು ಧರಿಗೆ ಯಾದವ-ರರಸೆ ಪೊರೆವನು ಕರುಣದಲಿ ಭೂಸುರರಗುರುದೊರೆ ಮರುತ ಪೊರೆವನುಸುರರವರ ಕಾದಿಹರು ಯೆನಿಪರ2
ಅವನಿಯೊಳಿವರನ ವೊಲಿಸಿದರೆಪಾವನವಾಗಿ ಪೋಗುವರುಭುವನದೊಳು ಕವಿಗಳೆನಿಸುತಿಪ್ಪರುಅವತರಿಸಿ ಮೂರು ||(ದುಡುಕು) ಭುವನ ಭವಕೆಪಾವಕರಾಗಿ ಭೂಸುರರಪಾವನವ ಮಾಡುವ ಭುವನ ನಿಧಿಸುತೆ ರಮಣಿ ಸಿರಿ ಮಾ-ಧವ ಮೋಹನ ವಿಠಲರೇಯನಅವಸರದ ಕಿಂಕರರ ಭಜಕರು 3
***