" ಶ್ರೀ ವಾದಿರಾಜ ಸ್ತುತಿ "
ರಚನೆ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೆಂಕಟನಾಥ
ಅಜ ಪದಾರ್ಹನೇ ವಾದಿ-
ರಾಜ ಗುರುವೇ ನಮೋ ।
ಅಜಕಾನನ ವಾಸನ ಪ್ರಿಯ -
ಭಾವಿಸಮೀರನೇ
ನಮೋ ನಮೋ ।। ಪಲ್ಲವಿ ।।
ರಾಮಾರ್ಯ ಸರಸ್ವ-
ತಮ್ಮ ಸುತನಾಗಿ ।
ಅಮಿತಪ್ರಕಾಶ ಭೂವರಾಹ
ನಾಮದಿ ಮೆರೆದೆ ।। ಚರಣ ।।
ಲಾತವ್ಯರೇ ವಾದಿರಾಜರಾಗಿ -
ಭುವಿಗಿಳಿದ ।
ಅತಿಚಿತ್ರ ಹಯವದನನ -
ಪೂಜಕ ।। ಚರಣ ।।
ವಾದಿಗಳಿಗೆ ರಾಜ
ವಾದಿರಾಜರೇ ।
ಮಧ್ವಪತಿ ಶ್ರೀ ವೆಂಕಟ-
ನಾಥನ ಸೇವಕ ।। ಚರಣ ।।
***