ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೀಡಮ್ಮನೆ
ಬೊಮ್ಮನಾ ಪಡೆದ ಶ್ರೀಹರಿ ಪರಬ್ರಹ್ಮನೆ ||ಪ||
ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ
ಓಡ್ಯಾಡಿ ಬಂದು ಅಂಡಲಿವೆ ನಾ ತಮ್ಮನೆ ||೧||
ಬಯಸಿ ಬಂದೊಡೆ ನಾ ಕಾಯಬೇಕೆನ್ನನ
ತಾಯಿ ತಂದ್ಯೊಬಳೆ ನೀನೇ ಸನಾತನ ||೨||
ಉಣಿಸು ನಾಮಾಮೃತ ದಣಿಸು ಮನೋರಥ
ದೀನ ಮಹಿಪತಿ ಜೀವ ಪ್ರಾಣಕ ಸನಾಥ ||೩|
***
ಮಾಂಡ್ ರಾಗ ಕೇರವಾ ತಾಳ (raga tala may differ in audio)
ಕಾಖಂಡಕಿ ಶ್ರೀ ಮಹಿಪತಿರಾಯರು
ಅಮ್ಮಾ ಬಾ ನಮ್ಮಮ್ಮನೆ ಅಮ್ಮೆ ನೀಡಮ್ಮನೆ ಬೊಮ್ಮನಾ ಪಡೆದ ಶ್ರೀ ಹರಿ ಪರಬ್ರಹ್ಮನೆ ಧ್ರುವ ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ಓಡ್ಯಾಡಿ ಬಂದು ಅಂಡಲಿವೆ ನಾ ತಮ್ಮನೆ 1
ಬಯಸಿ ಬಂದೊಡೆ ನಾ ಕಾಯಬೇಕೆನ್ನನಾ ತಾಯಿ ತಂದ್ಯೊಬ್ಬಳೆ ನೀನೆ ಸನಾತನಾ 2
ಉಣಿಸೆ ನಾಮಮೃತ ದಣಿಸೆ ಮನೋರಥಾ ದೀನಮಹಿಪತಿ ಜೀವ ಪ್ರಾಣಕ ಸನಾಥಾ 3
***