yes tadap tadap tune
ಎಲ್ಲಿರುವೆ ಸ್ವಾಮಿ ನೀನು
ಬಲುನೊಂದು ಬಂದೆ ನಾನು
ದಯೆತೋರಬಾರದೇನು
ಓ ಶನೇಶ್ವರನೇ ನೀನು
ಓ ಸ್ವಾಮಿಯೇ ಶನಿದೇವನೇ
ನಿನ್ನ ಕರುಣೆಯಿರದೆ ಹೇಗೆ ನಾನು ಬಾಳಲಿ ||ಎಲ್ಲಿರುವೆ||
ಮೊರೆ ಕೇಳದೇನು ಸ್ವಾಮೀ....
ದಯೆ ಬಾರದೇನು ತಂದೇ......
ಯಾರಿಗೇಳಲಯ್ಯನನ್ನನೋವ..
ನಿನ್ನನೇ ನಂಬಿದೆ ಈ ಜೀವ
ಕರುಣೆಯನು ನೀ ತೋರಿ
ನನ್ನನು ಕಾಪಾಡಪ್ಪ
ತಂದೆ ಶನಿದೇವನೇ
ಗತಿನೀನೆ ಮತಿ ನೀನೆ
ನನಗಾರು ಇಲ್ಲಪ್ಪ
ತಂದೆ ಶನಿದೇವನೇ||ಎಲ್ಲಿರುವೆ||
ನಾ ಹೇಳಲಾರೆನಯ್ಯಾ....
ನಾ ತಾಳಲಾರೆನಯ್ಯಾ....
ಯಾಕೆ ಸ್ವಾಮಿ ಬದುಕು
ಇಂತ ಘೋರ
ಬೆಂದು ಹೋದೆ ನನ್ನ
ಬಾಳ ಪೂರ
ನಿನ್ನ ಮಹಿಮೆ ಅರಿಯದೆಯೆ ನಿನ್ನನೆ ಮರೆತೋದೆ
ತಂದೆ ಶನಿದೇವನೇ
ಈ ಉಸಿರ ಕೊನೆವರೆಗೂ
ನಿನ್ನ ಸೇವೆ ಮಾಡುವೆನು
ತಂದೆ ಶನಿರಾಜನೇ ||ಎಲ್ಲಿರುವೆ||
*******