Showing posts with label ಪತಿತನಾದೆ ಎನ್ನ ಪೊರೆಯೊ ಯತಿರಾಘವೇಂದ್ರರಾಯ shreekara vittala. Show all posts
Showing posts with label ಪತಿತನಾದೆ ಎನ್ನ ಪೊರೆಯೊ ಯತಿರಾಘವೇಂದ್ರರಾಯ shreekara vittala. Show all posts

Monday, 6 September 2021

ಪತಿತನಾದೆ ಎನ್ನ ಪೊರೆಯೊ ಯತಿರಾಘವೇಂದ್ರರಾಯ ankita shreekara vittala

 ankita ಶ್ರೀಕರವಿಠಲ  

ರಾಗ: ಕಾಂಬೋಜಿ ತಾಳ: ಝಂಪೆ

ಪತಿತನಾದೆ ಎನ್ನ ಪೊರೆಯೊ ಯತಿರಾಘವೇಂದ್ರರಾಯ

ಗತಿಯಾರಕಾಣೆ ಮೊರೆಯನಾಲಿಸಯ್ಯ

ಮುಂದೆ ದಾರಿಗಾಣೆನೆಂದು ಬಂದುನಿಂದ ಭಕ್ತ-

ವೃಂದ ಪಾಲಿಸುವ ಧೊರೆಯೆ ಚಂದದಿಂದಲಿ ಗುರುವೆ 1

ಒಂದಾರುನೂರುವರುಷ ಅಂದವಾದ ವೃಂದಾವನದಿ

ನಿಂದು ತೋರುತಿಪ್ಪ ಮಹಿಮ ಮಹಾಮುನಿವರ್ಯನೆ 2

ಮೋದತೀರ್ಥವ್ಯಾಸಹೃದಯನಾದ ಶ್ರೀಕರವಿಠಲರೇಯ

ಬೋಧಿಸಿದೆ ಪರನು ಎಂದು ಭಕುತಬಂಧುವೆ ಕರುಣಾಸಿಂಧುವೆ 3

***